ಕೊಲ್ಹಾರ: ನನ್ನ ಮೇಲೆ ವಿಶ್ವಾಸವಿಟ್ಟು ವರಿಷ್ಠರು ನನಗೆ ಟಿಕೆಟ್ ಘೋಷಣೆ ಮಾಡಿದ್ದು ಇದು ಕೊಲ್ಹಾರ ಪಟ್ಟಣದ ಜನತೆಗೆ ಸಿಕ್ಕ ಅವಕಾಶವಾಗಿದ್ದು ತಮ್ಮೆಲ್ಲರ ಸೇವೆಗಾಗಿ ನನ್ನನ್ನು ಗೆಲ್ಲಿಸಬೇಕೆಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮನವಿ ಮಾಡಿದರು.
ಪಟ್ಟಣದ ಅಗಶಿಯ ಹತ್ತಿರ ಭಾರತೀಯ ಜನತಾಪಕ್ಷದ ಕೊಲ್ಹಾರ ತಾಲೂಕು ಕೇಂದ್ರ ಕಛೇರಿಯ ಉದ್ಘಾಟನೆ ಹಾಗೂ ಕಾರ್ಯಕರ್ತರ, ಮತದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಮತಕ್ಷೇತ್ರದ ಜನರ ಸೇವೆಗಾಗಿ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ಸಿಕ್ಕಿದ್ದು, ಇದು ನನ್ನ ಕೊನೆಯ ಚುನಾವಣೆಯಾಗಿದೆ. ನನಗೀಗ ೭೦ ವರ್ಷ. ಆದ್ದರಿಂದ ಕ್ಷೇತ್ರದ ಜನತೆ ನನ್ನ ಕೈಬಿಡುವುದಿಲ್ಲ ಎಂಬ ಅಚಲ ವಿಶ್ವಾಸ ನನಗಿದೆ ಎಂದರು.
ಬಸವನ ಬಾಗೇವಾಡಿ ಮತಕ್ಷೇತ್ರದ ಚುಣಾವಣಾ ಉಸ್ತುವಾರಿ, ಉತ್ತರಾಖಂಡ ರಾಜ್ಯದ ರಾಜ್ಯಸಭಾ ಸದಸ್ಯ ನರೇಶ್ ಬನ್ಸಾಲ್ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಆಡಳಿತ ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ಸರ್ವರೀತಿಯ ಸರಕಾರಿ ಯೋಜನೆಗಳು ಕಾರ್ಯಗತವಾಗುತ್ತಿದ್ದು, ಜನರಿಗೆ ಅನುಲಕೂಲವಾಗುತ್ತಿದೆ ಆದ್ದರಿಂದ ಮತದಾರರು ಈ ಬಾರಿಯ ಚುಣಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ವಿನಂತಿಸಿದರು.
ಸಭೆಯಲ್ಲಿ ಮಂಡಲ ಅಧ್ಯಕ್ಷ ಶಂಕರಗೌಡ ಪಾಟೀಲ, ಶಂಕರ ಗಣಾಚಾರಿ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ವಿರುಪಾಕ್ಷಿ ಕೋಲಕಾರ, ಕಲ್ಲಪ್ಪ ಸೊನ್ನದ, ಇಸ್ಮಾಯಿಲ ತಹಶೀಲ್ದಾರ, ಗೂಳಪ್ಪ ವಾಲಿಕಾರ, ಇಕ್ಬಾಲ ಮುಜಾವರ, ಬಸಪ್ಪ ಕೋಠಾರಿ, ಹಂಜಾಹುಶೇನ ಕಂಕರಪೀರ, ಶ್ರೀಮತಿ ಭಾರತೀ ಚೌಡಪ್ಪನವರ, ರಾಜಶೇಖರ ಶೀಲವಂತ, ಚಿನ್ನಪ್ಪ ಗಿಡ್ಡಪ್ಪಗೋಳ, ಪಟ್ಟಣ ಪಂಚಾಯತಿ ಬಿಜೆಪಿ ಸದಸ್ಯರಾದ ಬಾಬು ಭಜಂತ್ರಿ, ಅಪ್ಪಶಿ ಮಟ್ಯಾಳ, ಶ್ರೀಶೈಲ ಅಥಣಿ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment