ದೇವರಹಿಪ್ಪರಗಿ: ೨೦೨೩ ರ ವಿಧಾನಸಭೆಯ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಜಯಗಳಿಸುವಲ್ಲಿ ಕಾರ್ಯಕರ್ತರ ಪಾತ್ರ ಬಹುಮುಖ್ಯವಾಗಿದೆ ಎಂದು ಉತ್ತರಪ್ರದೇಶದ ಮಾಜಿ ಸಚಿವ ಆನಂದ ಸ್ವರೂಪ ಶುಕ್ಲಾಜೀ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಬಿಜೆಪಿಯ ಕಾರ್ಯಕರ್ತರು ಕ್ಷೇತ್ರದ ಮತದಾರರನ್ನು ಪಕ್ಷದೊಂದಿಗೆ ಜೋಡಿಸುವ ಕಾರ್ಯವನ್ನು ಅಭಿಮಾನ ಹಾಗೂ ಪ್ರೇಮದೊಂದಿಗೆ ಮಾಡಬೇಕು. ಎಲ್ಲಿ ಅಭಿಮಾನ ಹಾಗೂ ಪ್ರೇಮ ಇರುತ್ತದೆಯೋ ಅಲ್ಲಿ ದೋಷಣೆಗೆ ಅವಕಾಶವಿಲ್ಲ. ನಾಯಕರ ಕೆಲವು ತಪ್ಪು ನಡೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ದೇಶ ಹಾಗೂ ರಾಜ್ಯದ ಒಳಿತಿಗಾಗಿ ಚುನಾವಣೆಯಲ್ಲಿ ಕನಿಷ್ಠ ೧೫ ಗಂಟೆಗಳವರೆಗೆ ಕಾರ್ಯನಿರ್ವಹಿಸೋಣ. ಬಿಜೆಪಿಯ ಏಳು ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು, ಪ್ರಮುಖರೊಂದಿಗೆ ಸೇರಿ ಮನೆಮನೆ, ಓಣಿ, ಗ್ರಾಮಗಳಿಗೆ ತೆರಳಿ ಮತಯಾಚಿಸೋಣ ಎಂದರು.
ಮ0ಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ ಮಾತನಾಡಿ, ಸ್ಥಳೀಯ ಶಾಸಕರ ಸಾಧನೆ ಹಾಗೂ ರಾಜ್ಯ, ಕೇಂದ್ರ ಸರ್ಕಾರಗಳ ಜನಪ್ರೀಯ ಯೋಜನೆಗಳ ಕುರಿತು ಮತದಾರರಿಗೆ ಮನವರಿಕೆ ಮಾಡಿಸಿ ಚುನಾವಣೆಗೆ ಉಳಿದಿರುವ ಅಲ್ಪ ಸಮಯದಲ್ಲಿ ಜಯದ ಗುರಿ ಮುಟ್ಟಲು ಶ್ರಮಿಸೋಣ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಪಟ್ಟಣ ಪಂಚಾಯಿತಿ ಸದಸ್ಯ ಮಂಗಳೇಶ ಕಡ್ಲೇವಾಡ, ಸೋಮು ದೇವೂರ, ಈರಣ್ಣ ವಸ್ತçದ, ಮುತ್ತು ತೋಟದ, ಮಹಾಂತೇಶ ಬಿರಾದಾರ, ಹುಸೇನ್ ಗೌಂಡಿ, ಅಜೀಜ್ ಯಲಗಾರ, ಭೀಮನಗೌಡ ಲಚ್ಯಾಣ, ಶಿವರಾಜ್ ತಳವಾರ, ವಿಠ್ಠಲ ಯಂಕAಚಿ, ದಯಾನಂದ ರಾಠೋಡ, ವಿನೋದ ರಾಠೋಡ, ಆಕಾಶ ಕಬ್ಬಿನ, ಪಿಂಟೂ ಭಾಸುತ್ಕರ್ ಮಹಾಂತೇಶ ಗುಡಿಮನಿ, ಸುಭಾಷ ಗುಂಡಕನಾಳ, ಭೀಮಸಿಂಗ್ ಪವಾರ ಇದ್ದರು.
Related Posts
Add A Comment