ಕೊಲ್ಹಾರ: ನಂಜುಡಪ್ಪ ವರದಿ ಪ್ರಕಾರ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಅಖಂಡ ಬಸವನ ಬಾಗೇವಾಡಿ ತಾಲೂಕನ್ನು ಇಂದು ರಾಜ್ಯದಲ್ಲಿಯೇ ಮಾದರಿ ಮತಕ್ಷೇತ್ರವನ್ನಾಗಿ ಅಭಿವೃದ್ದಿ ಪಡಿಸಲು ಮತದಾರರಿಗೆ ಮಾತುಕೊಟ್ಟಂತೆ ನಡೆದುಕೊಂಡಿದ್ದೇನೆ. ದುಡಿದಿರುವ ನನಗೆ ಮತ್ತೊಮ್ಮೆ ತಾವುಗಳು ಹೆಚ್ಚಿನ ಮತಗಳಿಂದ ಆರಿಸಿ ತಮ್ಮೆಲ್ಲರ ಸೇವೆ ಮಾಡಲು ಅನುಕೂಲಮಾಡಿಕೊಡಬೇಕೆಂದು ಶಾಸಕ ಶಿವಾನಂದ ಪಾಟೀಲ ಮನವಿ ಮಾಡಿದರು.
ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಗೆದ್ದುಬಂದರೆ ಜನರಿಗೆ ನೀರಿನ ಬದಲು ಬಿಯರ್, ಸಾರಾಯಿ ಕುಡಿಸುತ್ತಾರೆ ಎಂದು ವಿರೋಧಿಗಳು ಅಪಪ್ರಚಾರ ಮಾಡಿದ್ದರು. ಆದರೆ ಅಪಪ್ರಚಾರ ಮಾಡಿದ ವ್ಯಕ್ತಿಗಳು ಇಂದು ತಮ್ಮ ಸ್ವಂತ ಊರಿನಲ್ಲಿ, ತಾಲೂಕಿನಲ್ಲಿ ಬಾರ್ ಗಳನ್ನು ನಡೆಸುತ್ತಿದ್ದಾರೆ. ಈಗ ಯಾರು ಜನರಿಗೆ ಬಿಯರ್ ಕುಡಿಸುತ್ತಿದ್ದಾರೆ ಎನ್ನುವ ಸತ್ಯ ಮತದಾರರು ಮನಗಾಣಬೇಕು ಎಂದರು.
ನನ್ನ ಅಧಿಕಾರಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವೆ. ಸಂಪರ್ಕ ರಸ್ತೆಗಳ ನಿರ್ಮಾಣ, ೧೧೦*೧೧ ಕೆವಿ ವಿದ್ಯುತ್ ಘಟಕಗಳ ಪ್ರಾರಂಭ, ಸರಕಾರಿ ಪದವಿ, ತಾಂತ್ರಿಕ, ಮಾಧ್ಯಮಿಕ, ಪದವಿಪೂರ್ವ ಕಾಲೇಜುಗಳ ಮಂಜೂರಾತಿ ಜೊತೆಗೆ ಕಟ್ಟಡಗಳ ನಿರ್ಮಾಣ, ವಸತಿ ನಿಲಯಗಳ ನಿರ್ಮಾಣ, ಬಸವನ ಬಾಗೇವಾಡಿ ಮತ್ತು ಕೊಲ್ಹಾರ ಪಟ್ಟಣದಲ್ಲಿ ಮೆಗಾ ಮಾರ್ಕೇಟ್, ಸೇರಿದಂತೆ ಅನೇಕ ಅಭಿವೃದಿ ಕಾಮಗಾರಿಗಳನ್ನು ಮತಕ್ಷೇತ್ರದಲ್ಲಿ ಮಾಡಿದ್ದು ಮತದಾರರು ನಾನು ಹ್ಯಾಟ್ರಿಕ್ ಜಯ ಸಾಧಿಸಲು ಕಾರಣೀಭೂತರಾಗಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಕಲ್ಲು ದೇಸಾಯಿ, ತಾನಾಜಿ ನಾಗರಾಳ, ಶ್ರೀಶೈಲ ಪತಂಗಿ, ಚಂದ್ರಶೇಖರಯ್ಯ ಗಣಕುಮಾರ, ಗುರು ಚಲವಾದಿ, ಚಂದ್ರಶೇಖರಗೌಡ ಪಾಟೀಲ ಮಾತನಾಡಿದರು.
ಚನಮಲ್ಲಪ್ಪ ಗಿಡ್ಡಪ್ಪಗೋಳ, ಸಿಪಿ ಪಾಟೀಲ, ರಫೀಕ ಪಕಾಲಿ, ರಾಹುಲ್ ಕುಬಕಡ್ಡಿ, ಶರಣಗೌಡ ಪಾಟೀಲ, ಎಸ್.ಪಿ.ಪಾಟೀಲ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment