ವಿಜಯಪುರ: ನಗರದಲ್ಲಿ ನಿರೀಕ್ಷೆಗೂ ಮೀರಿ ಆದ ಅಭಿವೃದ್ಧಿ ಹಾಗೂ ಸುರಕ್ಷತೆಯಿಂದ ಜನ ಈ ಬಾರಿ ಬಿಜೆಪಿಗೆ ಮತ ಹಾಕಲು ಉತ್ಸಾಹ ಹೊಂದಿದ್ದಾರೆ ಎಂದು ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಅವರು ಹೇಳಿದರು.
ನಗರದ ಕೆಎಚ್ ಬಿ ಕಾಲೊನಿಯ ಯೋಗಾ ಗಾರ್ಡನ್ ದಲ್ಲಿ ಶನಿವಾರ ವಾಯು ವಿಹಾರಿಗಳನ್ನು ಭೇಟಿ ಮಾಡಿದ ಅವರು, ಕಳೆದ ೨೫ ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯವನ್ನು, ಕೊರೊನಾದಿಂದ ಎರಡು ವರ್ಷ ಅಭಿವೃದ್ಧಿ ಕುಂಠಿತಗೊAಡರೂ, ಉಳಿದ ಕೇವಲ ಮೂರು ವರ್ಷದಲ್ಲಿ ವಿಜಯಪುರ ಮಾದರಿ ನಗರವಾಗಿ ಅಭಿವೃದ್ಧಿ ಮಾಡಿರುವ ತೃಪ್ತಿ ಇದೆ ಎಂದರು.
ಅಭಿವೃದ್ಧಿ ಜೊತೆಗೆ ದೌರ್ಜನ್ಯ, ಗೂಂಡಾಗಿರಿ ನಿಲ್ಲಿಸಿ, ಹಿಂದೂ ಬಾಂಧವರು ನೆಮ್ಮದಿಯಿಂದ ಬದುಕುವಂತೆ ಮಾಡಿರುವೆ. ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ನಮ್ಮ ಹೆಣ್ಣು ಮಕ್ಕಳಿಗೆ ಆಗುತ್ತಿರುವ ಅವಮಾನ ತಪ್ಪಿಸಲು ೩೫ ಕಡೆ ಮಾರುಕಟ್ಟೆ ಮಾಡಿರುವೆ ಎಂದರು.
ವಿಧಾನಸಭೆಯಲ್ಲಿ ಧ್ವನಿ ಎತ್ತಿದಕ್ಕೆ ಮತ್ತೆ ಹೆಚ್ಚುವರಿ ರೂ.೨೫೦ ಕೋಟಿ ಅನುದಾನ ಬಿಡುಗಡೆಗೊಂಡಿದ್ದರಿAದ ಅತ್ಯುನ್ನತ ವಿಮಾನ ನಿಲ್ದಾಣ ಆಗಲು ಸಾಧ್ಯವಾಯಿತು. ವೈನ್ ಪಾರ್ಕ, ಟೆಕ್ಸಟೈಲ್ಸ್ ಪಾರ್ಕ, ಜಿಟಿಟಿಸಿ ಕಾಲೇಜು ಮಂಜೂರು ಮಾಡಲಾಗಿದೆ. ಔದ್ಯೋಗಿಕ ನಗರ ಮಾಡಲಾಗುವುದು ಎಂದು ತಿಳಿಸಿದರು.
ಉತ್ತಮ ಜನಪ್ರತಿನಿಧಿಗಳು ಆಯ್ಕೆಯಾದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ಆಡಳಿತ ನಡೆಸುತ್ತಿರುವುದರಿಂದ, ಅಭಿವೃದ್ಧಿ ಜೊತೆಗೆ ಸುರಕ್ಷಿತವಾಗಿದ್ದೇವೆ. ಆರ್ಥಿಕತೆಯಲ್ಲಿ ಇಂಗ್ಲೆAಡನAತ ರಾಷ್ಟçವನ್ನು ಹಿಂದಿಕ್ಕಿ, ೫ನೇ ಸ್ಥಾನಕ್ಕೆ ಏರಿದೆ. ಅದೇ ರೀತಿಯ ಆಡಳಿತ ವಿಜಯಪುರದಲ್ಲಿ ಕಲ್ಪಿಸಿರುವೆ. ದೇಶದಲ್ಲಿ ಉತ್ತರ ಪ್ರದೇಶದ ಬಿಟ್ಟರೆ, ಕರ್ನಾಟಕದ ವಿಜಯಪುರದಲ್ಲಿ ಮಾತ್ರ ಬೋಲ್ಡೋಜರ್ ಘರ್ಜನೆ ಕೇಳುತ್ತದೆ ಎಂದು ಹೇಳಿದರು.
೪೦೦ಕ್ಕೂ ಹೆಚ್ಚು ಭೂಮಿಯನ್ನು ವಕ್ಪ್ ಬೋರ್ಡ ಆಸ್ತಿಯನ್ನಾಗಿ ಮಾಡಲಾಗಿದೆ. ಈ ಪೈಕಿ ಈಗಾಗಲೇ ೭೭ ಎಕರೆ ಮರಳಿ ಕಂದಾಯ ಇಲಾಖೆಗೆ ಮಾಡಿಸಲಾಗಿದೆ. ಉತ್ತರ ಪ್ರದೇಶದ ಮಾದರಿಯಲ್ಲಿ ಎಲ್ಲ ವಕ್ಪ್ ಆಸ್ತಿಯನ್ನು ಮರಳಿ ಸರ್ಕಾರದ ಆಸ್ತಿಯನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಮಳುಗೌಡ ಪಾಟೀಲ, ದ್ರಾಕ್ಷಿ ಮತ್ತು ವೈನ್ ಬೋರ್ಡ ಅಧ್ಯಕ್ಷ ಎಂ.ಎಸ್.ರುದ್ರಗೌಡರ, ಮುಖಂಡರಾದ ಎಂ.ಆರ್.ಪಾಟೀಲ, ಶರಣಪ್ಪ ಬಿರಾದಾರ, ಗಿರೀಶ ಮತ್ತಿತರರು ಇದ್ದರು.
ಅಭಿವೃದ್ಧಿ ಜೊತೆಗೆ ನೆಮ್ಮದಿಯ ಆಡಳಿತ ಕೊಟ್ಟ ತೃಪ್ತಿ :ಯತ್ನಾಳ
Related Posts
Add A Comment