ದೇವರಹಿಪ್ಪರಗಿ: ತಾಲ್ಲೂಕು ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯವಾದ ಜಮೀನನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶರಾದ ಎಚ್.ಪಿ.ಸಂದೇಶ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣಕ್ಕೆ ಶುಕ್ರವಾರ ನ್ಯಾಯಾಧೀಶರಾದ ಎಚ್.ಪಿ.ಸಂದೇಶ ವಿಜಯಪುರ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ನಲವಡೆ ಅವರೊಂದಿಗೆ ಆಗಮಿಸಿ ಪಟ್ಟಣದಲ್ಲಿ ನ್ಯಾಯಾಲಯದ ನೂತನ ಕಟ್ಟಡಕ್ಕೆ ಲಭ್ಯವಿರುವ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರಂಭದಲ್ಲಿ ವಿಜಯಪುರ ರಸ್ತೆಯಲ್ಲಿರುವ ಸರ್ವೆ ನಂ ೧೮೧, ಹಾಗೂ ೨೦೩ ನಂತರ ಹೊಸನಗರದ ದನದ ಸಂತೆ ಜರುಗುವ ಸ್ಥಳ ಸರ್ವೆ ನಂ ೦೭, ಸಿಂದಗಿ ರಸ್ತೆಯ ಸರ್ವೆ ನಂ ೮೦೪ ಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊನೆಗೆ ಸರ್ವೆ ನಂ ೨೦೩ಕ್ಕೆ ಪುನಃ ಭೇಟಿ ನೀಡಿ ತಹಶೀಲ್ದಾರರಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಸರ್ವೆ ನಂ ೨೦೩ ಜಮೀನು ತಹಶೀಲ್ದಾರ ಕಚೇರಿ ನಿರ್ಮಾಣಕ್ಕೆ ಮೀಸಲಾಗಿಟ್ಟಿರುವ ಕುರಿತು ತಹಶೀಲ್ದಾರ ಕವಿತಾ. ಆರ್. ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸಿಂದಗಿ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ನಾಗೇಶ ಮೊಗೆರಾ ಸ್ಥಳೀಯ ಪ್ರಮುಖರೊಂದಿಗೆ ಚರ್ಚಿಸಿ ತಾತ್ಕಾಲಿಕ ನ್ಯಾಯಾಲಯ ಆರಂಭಕ್ಕೆ ಲಭ್ಯವಿರುವ ಸರ್ಕಾರಿ ಶಾಲೆ ಅಥವಾ ಇನ್ನಿತರ ಅಗತ್ಯ ಕಟ್ಟಡಗಳ ಕುರಿತು ಮಾಹಿತಿ ಪಡೆದರು.
ಸಿಂದಗಿ ಪ್ರಧಾನ ಕಿರಿಯ ದಿವಾಣಿ ನ್ಯಾಯಾಧೀಶ ಮಾಂತೇಶ ಭೂಸಾಗೋಳ, ಹೆಚ್ಚುವರಿ ಕಿರಿಯ ದಿವಾಣಿ ನ್ಯಾಯಾಧೀಶ ಹರೀಶ ಜಾಧವ, ಪಟ್ಟಣದ ಪ್ರಮುಖರಾದ ಡಾ.ಆರ್.ಆರ್.ನಾಯಿಕ್, ಶಂಕರಗೌಡ ಪಾಟೀಲ(ಯರನಾಳ), ಶಾಂತಪ್ಪ ದೇವೂರ, ಸಿಂದಗಿ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ದೊಡಮನಿ, ಎಸ್.ಬಿ.ಪಾಟೀಲ, ಎಂ.ಬಿ.ಅAಗಡಿ, ಕೆ.ಎ.ಚವ್ಹಾಣ ಇದ್ದರು.
ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕಾಗಿ ಹೈಕೋರ್ಟ್ ನ್ಯಾಯಾಧೀಶರಿಂದ ಸ್ಥಳ ಪರಿಶೀಲನೆ
Related Posts
Add A Comment