ವಿಜಯಪುರ: ಸನ್ ೨೦೨೩-೨೪ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.೮೦ ರಷ್ಟು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸನ್ಮಾನ, ನಿವೃತ್ತ ಗೊಂಡ ಉಪ್ಪಾರ ಸಮಾಜದ ನೌಕರರು ಹಾಗೂ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಕುರಿತು ಚರ್ಚಿಸಲು ಪೂರ್ವಭಾವಿ ಸಭೆಯನ್ನು ದಿ : ೨೮-೦೭-೨೦೨೪ ರಂದು ರವಿವಾರ ಬೆಳಿಗ್ಗೆ ೧೧.೦೦ ಗಂಟೆಗೆ ನಗರದ ಶ್ರೀ ಹನುಮಾನ ಪ್ರೌಢಶಾಲೆ, ಶಿಕಾರಖಾನೆ, ವಿಜಯಪುರ ಇಲ್ಲಿ ಜಿಲ್ಲಾ ಉಪ್ಪಾರ ಸೇವಾ ಸಂಘ ಹಾಗೂ ಜಿಲ್ಲಾ ಉಪ್ಪಾರ ನೌಕರರ ಸಂಘ ಇವುಗಳ ಅಡಿಯಲ್ಲಿ ವಿಷಯಗಳನ್ನು ಚರ್ಚಿಸಲಾಗುವದು. ಕಾರಣ ಸಂಘದ ಸಮಸ್ತ ಉಪ್ಪಾರ ಸಮಾಜ ಸಂಘದ ಪದಾಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸಿ ತಮ್ಮ ಸಲಹೆ ಸೂಚನೆ ನೀಡಬೇಕೆಂದು ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷರಾದ ಜಕ್ಕಪ್ಪ ಎಡವೆ ಹಾಗೂ ಕಾರ್ಯದರ್ಶಿ ಸಿದ್ದು ಗೇರಡೆ ರವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
