ದೇವರಹಿಪ್ಪರಗಿ: 2023ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಗುರುವಾರ ಪ್ರಾರಂಭವಾಗಿದ್ದು, ಮೊದಲದಿನ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಶಿವಾನಂದ ಯಡಹಳ್ಳಿ ದೇವರಹಿಪ್ಪರಗಿ ಮತಕ್ಷೇತ್ರದ ಚುನಾವಣಾಧಿಕಾರಿ ಡಾ. ದುರುಗೇಶ ಅವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆ.ಆರ್.ಎಸ್ ಪಕ್ಷದ ಜಿಲ್ಲಾ ಉಸ್ತುವಾರಿ ವಿಜಯಕುಮಾರ್ ಯುಬಿ, ಪ್ರವೀಣ್ ಕನಸೆ, ರಾಘವೇಂದ್ರ ಚಲವಾದಿ, ಮೈಬೂಬ್ ತಾಂಬೋಳಿ, ರಾಕೇಶ್ ಇಂಗಳಗಿ, ಪ್ರವೀಣ್ ರಾಯಗೊಂಡ, ನರೇಂದ್ರ ರಾಠೋಡ, ಮಾಂತೇಶ ಮರ್ನೂರ, ಸುರೇಶ ಪಡಶೆಟ್ಟಿ ಸೇರಿದಂತೆ ಇತರರು ಇದ್ದರು.
ಮೊದಲ ದಿನ ಕೇವಲ ಒಬ್ಬರೆ ನಾಮಪತ್ರ ಸಲ್ಲಿಸಿದ್ದಾರೆ.
Related Posts
Add A Comment