ದೇವರಹಿಪ್ಪರಗಿ: ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಪಕ್ಷವೇ ವಿನಹಃÀ ವ್ಯಕ್ತಿಯಲ್ಲ. ಆದ್ದರಿಂದ ಪಕ್ಷದ ಗೆಲುವಿಗೆ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಉತ್ತರಖಂಡದ ಆರೋಗ್ಯ, ಶಿಕ್ಷಣ ಹಾಗೂ ಸಹಕಾರ ಸಚಿವ ಡಾ.ಧನಸಿಂಗ್ ರಾವತಜೀ ಹೇಳಿದರು.
ಅವರು ಪಟ್ಟಣಕ್ಕೆ ಗುರುವಾರ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಿದರು.
ಅಸಮಾಧಾನ ಏನೇ ಇದ್ದರೂ ಅದು ವ್ಯಕ್ತಿಗೆ ಸೀಮಿತವಾಗಿರಲಿ. ಪಕ್ಷ ದೊಡ್ಡದು, ಅದುವೇ ಕೊನೆಗೆ ಅಧಿಕಾರಕ್ಕೆ ಏರುವುದು. ಆದ್ದರಿಂದ ತಮ್ಮ ಮುನಿಸು ಇಂದಿಗೆ ಕೊನೆಗೊಳ್ಳಲಿ. ಪಕ್ಷದ ಗೆಲುವಿಗೆ ಶ್ರಮವಹಿಸಿ ಕನಿಷ್ಠ ಹತ್ತು ಸಾವಿರ ಮತಗಳ ಅಂತರದ ವಿಜಯಕ್ಕೆ ಕಾರಣರಾಗಿರಿ ಎಂದರು.
ರಾಜ್ಯಸಭೆ ಸದಸ್ಯ ಹಾಗೂ ಬಸವನಬಾಗೇವಾಡಿ ಮತಕ್ಷೇತ್ರದ ಉಸ್ತುವಾರಿ ವಹಿಸಿದ ಬನ್ಸಲ್ ಸಾಹೇಬ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಎಲ್ಲ ಸಮುದಾಯಗಳ ಹಿತ ಕಾಪಾಡಿ ಯಶಸ್ವಿಯಾಗಿದ್ದು, ಬಲಿಷ್ಠವಾಗಿದೆ. ಅದಕ್ಕೆ ಈಗ ಕಾರ್ಯಕರ್ತರ ಸಂಪೂರ್ಣ ಬೆಂಬಲ ಹಾಗೂ ಸಹಕಾರ ಮಾತ್ರ ಅಗತ್ಯವಾಗಿದೆ ಎಂದರು.
ಇAಡಿ ಮತಕ್ಷೇತ್ರದ ಕ್ಷೇತ್ರ ಸಂಚಾಲಕ ಬಿ.ಎಸ್.ಪಾಟೀಲ, ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಮಂಜುನಾಥ ಮಲ್ಲಿಕಾರ್ಜುನಮಠ, ಹುಸೇನ್ ಗೌಂಡಿ, ಈರಣ್ಣ ವಸ್ತçದ, ಸೋಮು ದೇವೂರ, ಸತೀಶ ಬೂದಿಹಾಳ, ಶಿವರಾಜ ತಳವಾರ, ಶಿವಾನಂದಯ್ಯ ಹಿರೇಮಠ, ಪಿಂಟೂ ಭಾಸುತ್ಕರ್, ಭೀಮನಗೌಡ ಲಚ್ಯಾಣ, ರಮೇಶ ಹೂಗಾರ, ವಿಠ್ಠಲ ಯಂಕAಚಿ(ಬಮ್ಮನಜೋಗಿ), ಮಹಾಂತೇಶ ಬಿರಾದಾರ, ಗುರುನಾಥ ಮುರುಡಿ (ಪಡಗಾನೂರ), ವಿನೋದ ರಾಠೋಡ, ದಯಾನಂದ ರಾಠೋಡ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment