ಮುದ್ದೇಬಿಹಾಳ: ಹೊಲದಲ್ಲಿ ಬೆಳೆದ ಬೆಳೆಗಳಿಗೆ ನೀರು ಕೊಡಲು ಸರಿಯಾಗಿ ವಿದ್ಯುತ್ ಇಲ್ಲದ ಕಾರಣ ಬೆಳೆಗಳು ಒಣಗಿ ಹೋಗುತ್ತಿದ್ದು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ತಾಲೂಕಿನ ಸರೂರ ಗ್ರಾಮದ ರೈತರು ಹೆಸ್ಕಾಂ ಎಇಇಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಹೆಸ್ಕಾಂ ಕಚೇರಿಗೆ ಆಗಮಿಸಿದ್ದ ರೈತರು, ಎಇಇ ಪರವಾಗಿ ಸೆಕ್ಷನ್ ಅಧಿಕಾರಿ ಬಿ.ಎಸ್.ಯಲಗೋಡ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಸಲ್ಲಿಸಿದ ಮನವಿಯಲ್ಲಿ, ತೋಟದ ಪಂಪಸೆಟ್‌ಗಳಿಗೆ ಹೊಲದಲ್ಲಿ ಬೆಳೆಗಳಿಗೆ ನೀರು ಸಮರ್ಪಕವಾಗಿ ಪೂರೈಸಲು ಆಗುತ್ತಿಲ್ಲ. ದಿನಕ್ಕೆ ಒಂದು ತಾಸು ಸರಿಯಾಗಿ ವಿದ್ಯುತ್ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಬೇಸಿಗೆ ಸಮಯದಲ್ಲಿ ಬೆಳೆಗಳಿಗೆ ಏಳು ತಾಸು ವಿದ್ಯುತ್ ಸರಬರಾಜು ಮಾಡಿದರೆ ಬೆಳೆಗಳಿಗೆ ಅನುಕೂಲವಾಗುತ್ತದೆ. ಲೈನಮನ್‌ಗೆ ವಿದ್ಯುತ್ ಸಮಸ್ಯೆ ಸರಿಪಡಿಸುವಂತೆ ಹೇಳಿದರೂ ಪರಿಹಾರ ದೊರೆತಿಲ್ಲ. ಬಿಸಿಲಿನ ತಾಪಕ್ಕೆ ಬೆಳೆಗಳು ಒಣಗಿ ಹೋಗುತ್ತಿವೆ ಎಂದು ತಿಳಿಸಲಾಗಿದೆ.
ಮನವಿಗೆ ರೈತರಾದ ಸಿ.ಎಸ್.ಪಾಟೀಲ್, ಆರ್.ಎನ್.ಪಾಟೀಲ್, ಎಸ್.ಬಿ.ಬಿಜ್ಜೂರ, ಎಂ.ಬಿ.ಬಿಜ್ಜೂರ, ಎಸ್.ಎಂ.ಗುರುವಿನ, ಬಿ.ಎಸ್.ಗುರುವಿನ, ಶಿವಯ್ಯ ಗುರುವಿನ, ರಾಮನಗೌಡ ಬಿರಾದಾರ, ಮಲ್ಲಪ್ಪ ಬಾದವಾಡಗಿ, ಪ್ರಶಾಂತ ಪೂಜಾರಿ, ಪರಶುರಾಮ ಬಯ್ಯಾಪೂರ, ಡಿ.ಬಿ.ವಾಲೀಕಾರ ಮೊದಲಾದವರು ಸಹಿ ಮಾಡಿದ್ದಾರೆ.
ಮನವಿ ಸ್ವೀಕರಿಸಿದ ಅಧಿಕಾರಿ ಯಲಗೋಡ ಮೇಲಾಧಿಕಾರಿಗಳ ಗಮನಕ್ಕೆ ಸಮಸ್ಯೆಯನ್ನು ತರುವುದಾಗಿ ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

