ಇಂಡಿ: ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ವೇಳೆಯಲ್ಲಿ ನಮ್ಮ ಜಿಲ್ಲೆಗೆ ಹಲವಾರು ನೀರಾವರಿ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ತರುವ ಮೂಲಕ ಅನ್ನದಾತರ ಅರಾಧ್ಯ ದೈವ ಎಂದೇ ಕರೆಸಿಕೊಂಡಿದ್ದಾರೆ ಎಂದು ಜಿಪಂ ಮಾಜಿ ಸದಸ್ಯೆ ಪದ್ಮಾವತಿ ಬಸವರಾಜ ಪಾಟೀಲ ಹೇಳಿದರು.
ಮಂಗಳವಾರ ಪಟ್ಟಣದ ವಾರ್ಡ್ ನಂ ೧೮.೧೯ರಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲರ ಪರವಾಗಿ ಮನೆ-ಮನೆಗೆ ತೆರಳಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಪಂಚರತ್ನ ಯೋಜನೆಯ ಮಹತ್ವ ತಿಳಿಸಿ ಹಾಗೂ ಭವಿಷ್ಯದ ದಿನಗಳಲ್ಲಿ ಇಂಡಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಜೆಡಿಎಸ್ಗೆ ಮತ ನೀಡಿ ಎಂದ ಅವರು, ನನ್ನ ಪತಿ ಬಡವರ ಬಗ್ಗೆ ಅಪಾರವಾದ ಕಳಕಳಿಯನ್ನು ಹೋಂದಿದ್ದು, ಇಂಡಿ ತಾಲೂಕಾ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಸುಮಾರು ೪೫ ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ ಫಲವಾಗಿ ಇಂದು ಹೋರ್ತಿ ಭಾಗಕ್ಕೆ ರೇವಣಸಿದ್ದೇಶ್ವರ ಏತನೀರಾವರಿಗೆ ಚಾಲನೆ ಸಿಕ್ಕಿದೆ. ೨೦೨೩ ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಡಿ. ಪಾಟೀಲರಿಗೆ ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಇದೆ ಸಂದರ್ಭದಲ್ಲಿ ಶ್ರೀ ಶೈಲಗೌಡ ಪಾಟೀಲ, ಸಿದ್ದು ಡಂಗಾ, ಮಹಿಬೂಬ ಬೇವನೂರ, ನಿಯಾಝ್ ಅಗರಖೇಡ, ಇರ್ಫಾನ್ ಅಗರಖೇಡ, ಪಜಲು ಮುಲ್ಲಾ, ಮಾಳು ಮ್ಯಾಕೇರಿ, ಶ್ರೀಶೈಲ ಪೂಜಾರಿ, ಎಚ್.ಜಿ. ಹಂಜಗಿ, ಅಶ್ವಿನಿ ಕಾರಬಾರಿ, ಸಿದ್ದವ್ವ ಗಡತಿ, ರೋಶನಬಿ ಕರೋಶಿ, ರಮ್ಜಾನ್ನಬಿ ಸೈಯದ್, ಜ್ಯೋತಿ ತಾಂಬೆ, ಯಲ್ಲವ್ವ ಶಿರಶ್ಯಾಡ ಸೇರಿದಂತೆ ಅನೇಕ ಕಾರ‍್ಯಕರ್ತರಿದ್ದರು.
Related Posts
Add A Comment