ಇಂಡಿ: ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳು ಯಥವತ್ತಾಗಿ ಜಾರಿಗೆ ತರುವ ಮೂಲಕ ಈ ಭಾಗದಲ್ಲಿ ಹಸಿರು ಕ್ರಾಂತಿಯನ್ನು ಮಾಡುತ್ತೇನೆ. ನುಡಿದಂತೆ ನಡೆದುಕೊಂಡು ನಿಮ್ಮ ಸೇವಕನಾಗಿ ದುಡಿದಿದ್ದೇನೆ. ಹೃದಯ ವೈಶಾಲ್ಯತೆಯುಳ್ಳ ನೀವುಗಳು ಮತ್ತೊಮ್ಮೆ ನನಗೆ ಕೂಲಿ ರೂಪದಲ್ಲಿ ಮತ ನೀಡಿ ಆಶಿರ್ವಾದ ಮಾಡಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಮನವಿ ಮಾಡಿದರು.
ತಾಲೂಕಿನ ಬಸನಾಳ ಗ್ರಾಮದಲ್ಲಿ ಇಂಡಿ ವಿಧಾನಸಭಾ ಮತಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನುದ್ದೆಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಇಂಡಿ ೩೨ ನೇ ಜಿಲ್ಲೆಯನ್ನಾಗಿ ಪರಿವರ್ತನೆ ಮಾಡಿ ಹೊಸ ವಿಧದಲ್ಲಿ ಸಾಗಬೇಕು. ಅಲ್ಲದೆ ಸಣ್ಣ ಕೈಗಾರಿಕೆಗಳು ಸ್ಥಾಪನೆಯಾಗಿ, ಉದ್ಯೋಗ ಸೃಷ್ಟಿಯಾಗಿ, ಕೈಗಾರಿಕಾ ಕ್ರಾಂತಿಯಾಗಬೇಕು. ಇನ್ನುಳಿದ ಭಾಗ ಸಂಪೂರ್ಣ ನೀರಾವರಿಯಾಗಬೇಕು ಎಂಬ ಕನಸು ನನ್ನದು. ಅದಕ್ಕಾಗಿ ಈ ಎಲ್ಲ ಅಭಿವ್ರದ್ದಿ ಕೆಲಸಗಳನ್ನು ಮಾಡಲು ನನಗೆ ಆಶಿರ್ವಾದ ಮಾಡಿ ಎಂದರು.
ಈ ಸಂದರ್ಭದಲ್ಲಿ ಬಿ.ಎಮ್.ಕೊರೆ, ಎಮ್.ಆರ್.ಪಾಟೀಲ, ಇಲಿಯಾಸ ಬೊರಾಮಣಿ, ಜಟ್ಟೆಪ್ಪ ರವಳಿ, ಗುರನಗೌಡ ಪಾಟೀಲ, ಮುತ್ತಪ್ಪ ಪೊತೆ, ಧರ್ಮರಾಜ ವಾಲಿಕಾರ, ಮಂಜು ಕಾಮಗೊಂಡ, ಮಹಾದೇವ ಮುಜಗೊಂಡ, ಶಿವುಸಾವಕಾರ ನಿಂಬಾಳ, ತಮ್ಮಣ್ಣ ಪೂಜಾರಿ, ಸಂಜು ಚವ್ಹಾಣ, ನಿರ್ಮಲಾ ತಳಕೇರಿ, ಪಾಸೋಡಿ ಮಾತನಾಡಿದರು.
ವೇದಿಕೆ ಮೇಲೆ ಇಂಡಿ ಬಳ್ಳೊಳಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಕಲ್ಲನಗೌಡ ಬಿರಾದಾರ, ಜಾವಿದ ಮೋಮಿನ ಹಾಗೂ ಮಲ್ಲನಗೌಡ ಪಾಟೀಲ, ಸಿದರಾಯ ಐರೋಡಗಿ, ಮಲಕಣ್ಣ ಗುಬ್ಬೇವಾಡ, ಪ್ರಶಾಂತ ಕಾಳೆ, ಶ್ರೀಕಾಂತ ಕೂಡಿಗನೂರ, ಸತ್ತಾರ ಬಾಗವಾನ ಇದ್ದರು.
ಬಿ.ಸಿ.ಸಾವಕಾರ ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವಿದ ಮೋಮಿನ, ಗುರನಗೌಡ ಪಾಟೀಲ, ಮಹಾದೇವ ಪೂಜಾರಿ, ಎಸ್.ಎಮ್.ಪಾಟೀಲ ಗಣಿಹಾರ, ಇಲಿಯಾಸ ಬೊರಾಮಣಿ, ಎಮ್.ಆರ್.ಪಾಟೀಲ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಸದಾಶಿವ ಪ್ಯಾಟಿ, ಪ್ರಶಾಂತ ಅಲಗೊಂಡ, ನೀಲಕಂಠ ರೂಗಿ ಮತ್ತಿತರಿದ್ದರು.
Related Posts
Add A Comment