ಇಂಡಿ: ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಅಭದ್ರತೆ ಕಾಡುತ್ತಿದೆ. ಶಾದಿ ಮಹಲ್ ಕಟ್ಟಿ ಕೊಡುವುದರಿಂದ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಮುಸ್ಲಿಂ ಸಮುದಾಯದ ಮೀಸಲಾತಿ ಕಿತ್ತು ಹಾಕಿದ್ದಾರೆ. ಇನ್ನೂ ಬಲಗೈ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಸತತ ಮೋಸ ಮಾಡಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷ ಒಂದೇ ನಾಣ್ಯದ ಎರಡು ಮುಖಗಳು ಎಂದು ಬಿಎಸ್ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ ಆರೋಪಿಸಿದರು.
ಪಟ್ಟಣದಲ್ಲಿ ಜ್ಯೋತಿಬಾ ಪುಲೆ 196 ರ ಜಯಂತಿ ಹಾಗೂ ಬಿಸ್ಪಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಬಿಸ್ಪಿ ಪಕ್ಷದ ಘೋಷಿತ ಅಭ್ಯರ್ಥಿ ನಾಗೇಶ ಶಿವಶರಣ ಪರ ಮತಯಾಚನೆ ಮಾಡಿದರು.
ಬಿಜೆಪಿ ಸರ್ಕಾರ ಒಳ ಮೀಸಲಾತಿಯಲ್ಲಿ ಕಂದಕ ಸೃಷ್ಟಿ ಮಾಡಿ ಜಗಳ ಹಚ್ಚುವ ಕೆಲಸ ಮಾಡಿದರು. ಸಂವಿಧಾನದ ತಳಹದಿ ಮೇಲೆ ಬಹುಜನ ಸಮಾಜ ಪಕ್ಷ ನಿಂತಿದ್ದು ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳಿಗೆ ಧ್ವನಿಯಾಗಿ ನಿಲ್ಲುವ ಪಕ್ಷವಾಗಿದೆ. ಈ ಬಾರಿ ಸರಕಾರ ರಚಿಸುವಲ್ಲಿ ಬಹುಜನ ಸಮಾಜ ಪಕ್ಷ ಮಹತ್ತರ ಪಾತ್ರ ವಹಿಸಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಎಸ್ಪಿ ಅಭ್ಯರ್ಥಿ ನಾಗೇಶ ಶಿವಶರಣ ಮಾತಾನಾಡಿ ಮತ ಯಾಚಿಸಿದರು.
ರಾಜ್ಯ ಕಾರ್ಯದರ್ಶಿ ರಾಜು ಮಾದರ, ಜಿಲ್ಲಾ ಕಾರ್ಯದರ್ಶಿ ಏಕನಾಥ ದ್ವಾಶ್ಯಾಳ, ಮಹಮ್ಮದ ಅಸ್ಪಾಕ , ಸಿಂದಗಿ ತಾಲೂಕು ಅಧ್ಯಕ್ಷ ರಮೇಶ ಐಹೊಳೆ, ಚಂದ್ರಶೇಖರ ದೇವೂರ ಇನ್ನೂ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.