ಹೊನವಾಡ: ಕೋವಿಡ್ ಮಹಾಮಾರಿ ದೇಶಾದ್ಯಂತ ವ್ಯಾಪಿಸಿದಾಗ ಪ್ರಧಾನಿಯವರ ನಾಯಕತ್ವದಲ್ಲಿ ಸಮರ್ಥವಾಗಿ ಕೋವಿಡ್ ಎದುರಿಸಿ ಹಿಂದಿನ ಸ್ಥಿತಿಗೆ ಮರಳಿದ್ದೇವೆ. ಆರ್ಥಿಕ ಪರಿಸ್ಥಿತಿ ಕೂಡ ಚೇತರಿಸಿಕೊಂಡಿದೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ನುಡಿದರು.
ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರಂಭದಲ್ಲಿ ಕೊರೊನಾ ಲಸಿಕೆಯನ್ನು ಅಪಹಾಸ್ಯ ಮಾಡಿದ ಕಾಂಗ್ರೆಸ್ಸಿಗರು ಅದನ್ನು ಮೋದಿ ಲಸಿಕೆ ಎಂದು ಕರೆದರಲ್ಲದೆ, ಲಸಿಕೆ ಪಡೆದರೆ ಸಂತಾನ ಶಕ್ತಿ ಕಳೆದುಕೊಳ್ಳುತ್ತಾರೆ ಎಂಬ ಅಪಪ್ರಚಾರವನ್ನು ಸಹ ಮಾಡಿತ್ತು. ಆದರೆ ಕೋವಿಡ್ ತೀವ್ರವಾದ ಬಳಿಕ ಕಾಂಗ್ರೆಸ್ ನಾಯಕರೇ ಸಾಲಿನಲ್ಲಿ ನಿಂತು ಲಸಿಕೆ ಪಡೆದರು ಎಂದು ವಿಜುಗೌಡ ಪಾಟೀಲ ವ್ಯಂಗ್ಯವಾಡಿದರು.
ಇಂದಿನ ದಿನಗಳಲ್ಲಿ ದೇಶ ಅಭಿವೃದ್ಧಿಯಾಗಿದೆ ಎಂದರೆ ಅದಕ್ಕೆ ಬಿಜೆಪಿ ಕಾರಣ. ಚುನಾವಣೆ ಬಂದಾಗ ಸೀರೆ ಕುಕ್ಕರ್ ಮೊಬೈಲ್ ಹಂಚುವುದು ಅಭಿವೃದ್ಧಿಯ ಕೆಲಸವಲ್ಲ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ಗಣೇಶ್ ಗುಗ್ಗರಿ ಮತ್ತು ಗ್ರಾಮದ ಅನೇಕ ಯುವಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ವೇದಿಕೆಯ ಮೇಲೆ ಬಿಜೆಪಿ ಒಬಿಸಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕ್ ಡಬ್ಬಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಸವರಾಜ್ ಬಿರಾದಾರ, ಬಬಲೇಶ್ವರ ಮಂಡಲ ಅಧ್ಯಕ್ಷ ವಿಠಲ್ ಕಿರಶೋರ, ಡಾ ಇಸ್ಮಾಯಿಲ್ ಜತ್ತಿ, ರೋಡಗಿ ಡಾ.ತೆಲಸಂಗ, ಮಾಳಪ್ಪ ಗುಗ್ಗರಿ, ನೀಲಕಂಠ ಕೋಟಿ, ರಾವಸಾಬ್ ಮೂರತೆಲಿ, ಲಿಂಗರಾಜ ಪಾಟೀಲ, ಗಣೇಶ್ ಗುಗ್ಗರಿ, ಮೊನೇಶ ಪತ್ತಾರ, ಮದಿನ ಶಾ ವಾಲಿಕಾರ ,ಅಣ್ಣೂಸಾಬ ತಿಕೋಟಾ, ಆನಂದ್ ಕೋರಬು, ಶಿವಾಜಿ ಜಾಧವ ಸೇರಿದಂತೆ ಅನೇಕರಿದ್ದರು.
Related Posts
Add A Comment