ಬಸವನಬಾಗೇವಾಡಿ: ತಾಲೂಕಿನ ಇವಣಗಿ ರಸ್ತೆಯಿಂದ ಕಣಕಾಲ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಅಂಬಳನೂರ ಕ್ರಾಸ್ ಹತ್ತಿರ ಅಬಕಾರಿ ಅಧಿಕಾರಿಗಳು ಶುಕ್ರವಾರ ರಸ್ತೆಗಾವಲು ಮಾಡುತ್ತಿರುವ ಸಂದರ್ಭದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು ರೂ. ೪೬,೪೦೦ ಮೌಲ್ಯದ ೫,೭೬೦ ಲೀ. ಮದ್ಯ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ರಮೇಶ ಯಮನಪ್ಪ ನನ್ನೂರ ದಾಳಿ ಸಮಯದಲ್ಲಿ ಪರಾರಿಯಾಗಿದ್ದಾರೆ. ಅಬಕಾರಿ ಉಪ ನಿರೀಕ್ಷಕ ಎಸ್.ಎ.ಹುಂಡೇಕಾರ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಬಕಾರಿ ದಾಳಿಯನ್ನು ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ, ಉಪ ಅಽಕ್ಷಕ ಎಲ್.ಎಸ್.ಸಲಗರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಜಿ.ಎಸ್.ಪಾಟೀಲ ನೇತೃತ್ವದಲ್ಲಿ ಅಬಕಾರಿ ಪೇದೆಯವರಾದ ಅನಿಲ ಕರಜಗಿ, ಭೀಮಾಶಂಕರ ಸಂಗೊಂಡ, ಯಮನಪ್ಪ ಮಾದರ, ವಾಹನ ಚಾಲಕ ಬಸು ಶಖಾಪುರ ತಂಡ ಮದ್ಯ, ದ್ವಿಚಕ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆಯ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment