ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಹಿರೇಮಠದ ಶತಾಯುಷಿ ಲಿಂ.ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೪೦ ನೇ ಪುಣ್ಯ ಸ್ಮರಣೋತ್ಸವ ಹಾಗೂ ಲಿಂ.೨೦೦೮ ಜಗದ್ಗುರು ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ೧೦ ನೇ ಯಾತ್ರಾ ಮಹೋತ್ಸವದಂಗವಾಗಿ ಮೇ.೧೫ ರಂದು ನಡೆಯಲಿರುವ ಜಾತ್ರಾಮಹೋತ್ಸವದ ವಾಲ್ ಪೋಸ್ಟರ್ ಅನ್ನು ಶನಿವಾರ ಶ್ರೀಮಠದ ಅಭಿನವ ಸಂಗನಬಸವ ಸ್ವಾಮೀಜಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಜಾತ್ರಾಮಹೋತ್ಸವದಂಗವಾಗಿ ಮೇ. ೧ ರಿಂದ ಪ್ರತಿನಿತ್ಯ ಸಂಜೆ ೭ ಗಂಟೆಗೆ ಶಿವಶರಣೆ ಹೇಮರಡ್ಡೆ ಮಲ್ಲಮ್ಮಳ ಚರಿತಾಮೃತ ಪುರಾಣ ನಡೆಯಲಿದೆ. ರೋಣ ತಾಲೂಕಿನ ಬೂದಿಹಾಳದ ಗವಿಸಿದ್ದೇಶ್ವರ ಶಾಸೀಗಳು ಪುರಾಣ ಹೇಳುವರು. ಮೇ.೧೪ ರಂದು ಬೆಳಗ್ಗೆ ೬.೨೦ ಗಂಟೆಗೆ ಪಂಚಾಚಾರ್ಯ ಧ್ವಜಾರೋಹಣ ನಂತರ ಸಾಮೂಹಿಕ ಶಿವದೀಕ್ಷೆ ಮತ್ತು ಅಯ್ಯಾಚಾರ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೧೦ ಗಂಟೆಗೆ ಮನಗೂಳಿ, ಕುಬಕಡ್ಡಿ, ವಿಜಯಪುರ, ಅಡತಿಗಲ್ಲಿ, ಬಬಲೇಶ್ವರ ಸೇರಿದಂತೆ ಇತರೇ ಗ್ರಾಮಗಳ ಭಕ್ತರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮೇ.೧೫ ರಂದು ಬೆಳಗ್ಗೆ ೭ ಗಂಟೆಗೆ ಬಸಪ್ಪ ಹುಣಸಿಕಟ್ಟಿಯವರ ತೋಟದಿಂದ ವಿವಿಧ ವಾದ್ಯಮೇಳದೊಂದಿಗೆ ಕುಂಭ ಮೆರವಣಿಗೆಯು ಶ್ರೀಮಠಕ್ಕೆ ಆಗಮಿಸುವದು. ನಂತರ ೮ ಗಂಟೆಗೆ ಉಭಯ ಶ್ರೀಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ನಡೆಯಲಿದೆ. ೯ ಗಂಟೆಗೆ ಉಭಯ ಶ್ರೀಗಳ ರಜತ ಮೂರ್ತಿಗಳ ಪಲ್ಲಕ್ಕಿ ಮಹೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಮಧ್ಯಾನ್ಹ ೧೨ ಗಂಟೆಗೆ ಧರ್ಮಸಭೆ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಗಪ್ಪ ಉಮನಾಬಾದಿ, ಕೃಷ್ಣಪ್ಪ ಗಾಡದ, ಈರಪ್ಪ ಭಾವಿಕಟ್ಟಿ, ಭೀಮಣ್ಣ ಬನ್ನೂರ, ಸಂಗಮೇಶ ಉಪ್ಪಾರ, ನೀಲಕಂಠ ಸಣ್ಣಕಲ್, ರವಿ ತಪಶೆಟ್ಟಿ, ಸಂತೋಷ ಭಾವಿಕಟ್ಟಿ, ಶ್ರವಣ ಕೋಟ್ಯಾಳ, ಕುಮಾರ ಪಾಟೀಲ, ಮಂಜುನಾಥ ಬನಸೋಡೆ, ಮಹೇಶ ಕವಾಸಪುರ, ಸೋಮು ಬನ್ನೂರ, ಅಭಿಷೇಕ ಕವಾಸಪುರ, ಮಹಾಂತೇಶ ಮನಗೂಳಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment