ದೇವರಹಿಪ್ಪರಗಿ: ಮತಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲಿಸಬೇಕೆAದು ಶಾಸಕ ಸೋಮನಗೌಡ ಪಾಟೀಲರ ಚಿರಂಜೀವಿ, ಬಿಜೆಪಿ ಯುವ ಮುಖಂಡ ಸಂಗನಗೌಡ ಪಾಟೀಲ ಸಾಸನೂರ ಮನವಿ ಮಾಡಿದರು.
ಶುಕ್ರವಾರ ಸಂಜೆ ದೇವರಹಿಪ್ಪರಗಿ ತಾಂಡದಲ್ಲಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಪರ ಪ್ರಚಾರ ಕಾರ್ಯದಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ನಮ್ಮ ತಂದೆಯವರು ಸಾವಿರಾರು ಕೋಟಿ ರೂ. ಅನುದಾನ ತಂದು ಸಮಗ್ರ ನೀರಾವರಿ, ಕೆರೆ ತುಂಬುವ ಯೋಜನೆಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕ್ಷೇತ್ರದ ರಸ್ತೆ ಸುಧಾರಣೆಗೆ ಒತ್ತು ನೀಡಿದ್ದು, ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಿದೆ ಅದಕ್ಕಾಗಿ ಜಾತಿ-ಮತ ನೋಡದೆ ಅಭಿವೃದ್ಧಿಗಾಗಿ ಬಿಜೆಪಿಗೆ ಬೆಂಬಲಿಸಬೇಕೆAದು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಸೇವಾಲಾಲ ಮಹಾರಾಜರ ಮತ್ತು ದುರ್ಗಾ ಮಾತೆಯ ಆಶೀರ್ವಾದ ಪಡೆದು ಬಂಜಾರ ಸಮಾಜದ ಬಂಧುಗಳಲ್ಲಿ ಮತಯಾಚನೆ ಮಾಡಿದರು.
ಇದೆ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ವಿನೋದ ಚವ್ವಾಣ, ಮಂಗಲೇಶ ಕಡ್ಲವಾಡ, ಸೋಮು ದೇವೂರ, ಶಂಕರ ಜಮಾದಾರ, ಸತೀಶ ಬೂದಿಹಾಳ, ಕಾಸು ಬಿರಾದಾರ ಹಾಗೂ ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕ ಶಿವುರಾಜ ತಳವಾರ ಸೇರಿದಂತೆ ಮತ್ತಿತರರಿದ್ದರು.
Related Posts
Add A Comment