ಢವಳಗಿ: ಢವಳಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಅವg ಪರ ಅವರ ಪುತ್ರರಾದ ಶರತಗೌಡ ಮತ್ತು ಭರತಗೌಡ ಅವರು ಪ್ರಚಾರಕ್ಕಾಗಿ ಆಗಮಿಸಿದಾಗ ಅಭಿಮಾನಿಗಳು ಅದ್ದೂರಿ ಸ್ವಾಗತ ನೀಡಿದರು.
ಈ ಸಂದರ್ಭ ಮಾತನಾಡಿದ ಭರತಗೌಡ, ಶಾಸಕ ನಡಹಳ್ಳಿ ಅವರು ಎಷ್ಟೇ ಅಭಿವೃದ್ದಿ ಕೆಲಸ ಮಾಡಿದರೂ ಇದನ್ನು ಸಹಿಸದ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ನಿಮಗೆ ಯಾರು ಒಳ್ಳೆಯವರು ಅಂತ ಅನಿಸುತ್ತಾರೋ ಮತ್ತು ಅಭಿವೃದ್ದಿ ಪರ ಕೆಲಸ ಮಾಡುತ್ತಾರೆ ಅವರಿಗೆ ಬೆಂಬಲಿಸಿ ಎಂದರು.
ಶರತಗೌಡ ಪಾಟೀಲ ನಡಹಳ್ಳಿ ಅವರು ಮಾತನಾಡಿ, ರಾಜಕಾರಣದಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಅವು ಸೌಹಾರ್ದಯುತ ಆಗಿರಬೇಕು. ಶಾಸಕರು ಮಾಡಿರುವ ಕೆಲಸಗಳು ಜನತೆಯ ಕಣ್ಣ ಮುಂದೆ ಇರುವಾಗ ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ಜನರು ಮನ್ನಣೆ ಕೊಡುವುದಿಲ್ಲ ಎಂದರು.
ಈ ಸಂಧರ್ಬದಲ್ಲಿ ಬಾಪೂಗೌಡ ಪಾಟೀಲ(ಹಳ್ಳದಂಡಿ), ಮಲ್ಲನಗೌಡ ಬಿರಾದಾರ, ಸುಭಾಷ ಗುಡಿಮನಿ, ಮಡಿವಾಳಪ್ಪ ಬೀರಗೊಂಡ, ಗಂಗಪ್ಪ ಬಡಿಗೇರ, ಸಂಗಣ್ಣಮಾಸ್ತರ ಕೊಣ್ಣುರ, ಮಡಿವಾಳಪ್ಪ ಸುತಗುಂಡರ, ಮಡಿವಾಳಪ್ಪಗೌಡ ಬಿರಾದಾರ, ರಾಜಾಸಾಬ ಶಿರಗುಂಪಿ, ಸಿದ್ದಪ್ಪ ಬೆಲ್ಲಾö್ಯಳ, ಸಂಗಮೇಶ ಬಿರಾದಾರ, ಬಸವರಾಜ ಯರಿಕ್ಯಾಳ, ಶಾಂತು ಹೊಸಮನಿ, ಶಂಕ್ರಪ್ಪ ಹೂಗಾರ, ನಿಂಗಪ್ಪ ರಾಜನಾಳ, ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment