ಢವಳಗಿ: ಗ್ರಾಮದಲ್ಲಿ ಮಾಜಿ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿ ಎಸ್ ನಾಡಗೌಡ ಅಪ್ಪಾಜಿ ಪರ ಅವರ ಸುಪುತ್ರಿ ಪಲ್ಲವಿ ನಾಡಗೌಡ ಅವರು ಕಾಂಗ್ರೆಸ್ ಗ್ಯಾರೆಂಟಿ ಕಾರ್ಡನ್ನು ಮನೆಮನೆಗೆ ಹೋಗಿ ತಲುಪಿಸಿ ಕಾಂಗ್ರೆಸ್ ಪಕ್ಷದ ಹಲವು ಜನಪರ ಯೋಜನೆಗಳನ್ನು ಜನರಿಗೆ ತಿಳಿಸಿ ಮತನಾಡಿದರು.
ಚುನಾವಣೆ ಸಂದರ್ಭದಲ್ಲಿ ಜನರು ಸೀರೆ,ಕುಪ್ಪಸ,ಮತ್ತು ಟೀಶರ್ಟ,ಪ್ಯಾಂಟ್ ಗಳ ಆಮಿಷಕ್ಕೆ ಒಳಗಾಗದಿರಿ. ಜನಸಾಮಾನ್ಯರ ಸಂಕಷ್ಟದ ಬದುಕಿಗೆ ನೆರವಾಗುವ ಯೋಜನೆ ಕಾಂಗ್ರೆಸ್ ರೂಪಿಸಿದೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಪರ್ಸಂಟ್ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದು ನುಡಿದರು.
ಢವಳಗಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆಗಳಾದ ಕೆಇಬಿ, ಪಶು ವೈಧ್ಯಾಲಯ, ಕಸ್ತೂರಭಾ ಗಾಂಧಿ ಶಾಲೆ, ಬಾಲಕರ ವಸತಿ ನಿಲಯ, ಕೃಷಿ ಮಾರುಕಟ್ಟೆ, ರೈತ ಸಂಪರ್ಕ ಕೇಂದ್ರ,ಇನ್ನೂ ಅನೇಕ ಸಾರ್ವಜನಿಕ ಯೋಜನೆಗಳು ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಯಲ್ಲಿ ಆಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷೆ ಪ್ರತಿಭಾ ಅಂಗಡಗೇರಿ ಮಾತನಾಡಿದರು.
ಬಾಪೂಗೌಡ ಪಾಟೀಲ(ಅಂಗಡಗೇರಿ), ವಿನೋಧಗೌಡ ಕೊಣ್ಣುರ, ಅಣ್ಣಪ್ಪಗೌಡ ಪಾಟೀಲ, ಶಿವನಗೌಡ ಕೊಣ್ಣುರ, ಮುರಿಗೆಪ್ಪಗೌಡ ಕೊಣ್ಣುರ ಸೇರಿದಂತೆ ಅನೇಕ ಜನರಿದ್ದರು.
Related Posts
Add A Comment