ವಿಜಯಪುರ: ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ನಿಶ್ಚಿತವಾಗಿದ್ದು, ಬೇರೆ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಹಾಗೂ ಟಿಕೆಟ್ ತಪ್ಪುತ್ತದೆ ಎಂಬ ಹೇಳಿಕೆಗಳು ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ನಗರ ಯುವ ಮೋರ್ಚಾ ಮಾಜಿ ಅಧ್ಯಕ್ಷ ರಾಘವ್ ಅಣ್ಣಿಗೇರಿ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಗರದ ಸಮಗ್ರ ಅಭಿವೃದ್ಧಿಯಾಗಿದ್ದು, ಜನಪ್ರಿಯತೆಯನ್ನು ಹೊಂದಿರುವ ಬಸನಗೌಡ ಪಾಟೀಲ ಯತ್ನಾಳ ಅವರು, ಹಿಂದುತ್ವವಾದಿಗಳಾಗಿದ್ದು, ನಗರದ ಅಭಿವೃದ್ಧಿಯಿಂದಲೇ ಜನಮನದಲ್ಲಿದ್ದಾರೆ ಎಂಬುವುದು, ಪಕ್ಷದ ರಾಜ್ಯ ಘಟಕ ಹಾಗೂ ರಾಷ್ಟç ಘಟಕಕ್ಕೆ ಗೊತ್ತು. ಕಾರಣ ಇವರಿಗೆ ಪಕ್ಷದ ಟಿಕೆಟ್ ಸಿಗುವುದು ನಿಶ್ಚಿತ. ಶಾಸಕರಾಗಿ ಅಭಿವೃದ್ಧಿ ಕೆಲಸ ಮಾಡಿದ ಯತ್ನಾಳರು ನಗರ ಮತಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೆ.
ವಿನಾಕಾರಣ ಗೊಂದಲ ಮೂಡಿಸಲು ಕೆಲವರು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದು, ಅದನ್ನು ಯಾರು ಕೂಡ ನಂಬಬಾರದು. ನಗರದ ಜನತೆಯ ಇಚ್ಚೆಯಂತೆ, ಏ.೧೩ ರ ಗುರುವಾರ ಶುಭ ಮುಹೂರ್ತದಲ್ಲಿ ಬೃಹತ್ ಭವ್ಯ ಮೆರವಣಿಗೆ ಮೂಲಕ ತೆರಳಿ, ವಿಜಯಪುರ ನಗರ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಬಸನಗೌಡÀ ಅವರು ನಾಮ ಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.