ಅಂತರಾಳದ ಸರೋವರದ ತೆರೆಗಳಲಿ
ನೋವು ನಲಿವಿನ ಸುಮಧುರ ಬಾಳಿನಲಿ
ಸುಯ್ಯನೇ ಬೀಸುವ ತಂಗಾಳಿಯಲಿ
ನಿನ್ನ ಆರಾಧನೆಯೇ ನವ ವಸಂತ ಗೆಳತಿ ನನ್ನಲಿ॥
ಕಣ್ಣಲ್ಲೇ ಕಣ್ಣಿಟ್ಟು ನೋಡಬೇಡ ಹಿಂಗ ಚಿನ್ನ
ಅಂತರಂಗದ ಅರಮನೆಯಲಿ ನೀನೇ ರನ್ನ
ನಿನ್ನಪ್ಪುಗೆಯ ಸಂಭ್ರಮ ನನಗಿರಲಿ ಚೆನ್ನ
ನಿನ್ನ ಪ್ರೀತಿಯ ಸಿರಿಯಲಿ ಸಂತಸದ ಬಣ್ಣ
ನೀನೀರದ ಕ್ಷಣ ಬೇಡವೆನಗೆ ಬದುಕಲಿ
ಸದಾ ನಿನ್ನ ಪಿಸುಮಾತಿನ ಸೊಬಗಿರಲಿ
ಸಪ್ತಸ್ವರ ಸಂಗೀತದ ಸಂಗಮದಂತಿರಲಿ
ನಿನ್ನ ಆರಾಧನೆಯಲಿ ನನಗೆ ಆತ್ಮಸಂತೃಪ್ತಿ ಸಿಗಲಿ