ವಿಜಯಪುರ: ಕಳೆದ ನಾಲ್ಕಾರು ದಿನಗಳಿಂದ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರವಾಗಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಣದ ಬೆಂಬಲಿಗರ ನಡುವೆ ಪತ್ರಿಕಾ ಹೇಳಿಕೆಗಳ ಸಮರ ನಡೆದಿದ್ದು ಅದರ ಮುಂದುವರಿದ ಭಾಗವಾಗಿ ಇಂದೂ (ಏ.೭) ಸಹ ಅಪ್ಪು ಪಟ್ಟಣಶೆಟ್ಟಿ ಬೆಂಬಲಿಗರಿAದ ಸುದ್ದಿಗೊಷ್ಟಿ ನಡೆಯಿತು.
ಶಾಸಕ ಯತ್ನಾಳ ಮತ್ತು ಮಾಜಿ ಸಚಿವ ಪಟ್ಟಣಶೆಟ್ಟಿಯವರ ಬೆಂಬಲಿಗರ ಈ ಹಿಂದಿನ ಎರಡು ಸುದ್ದಿಗೋಷ್ಠಿಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಿಂದಲೇ ಕೂಡಿದ್ದವು. ತಮ್ಮ ನಾಯಕರಿಗೆ ಪಕ್ಷದ ಟಿಕೆಟ್ ದೊರೆಯದಿದ್ದರೆ ತಟಸ್ಥರಾಗುಳಿಯುವ ಎಚ್ಚರಿಕೆ ಹೊಂದಿದ್ದವು. ಪರಸ್ಪರ ಕಾಲೆಳೆಯುವ ವ್ಯಂಗ್ಯೋಕ್ತಿಗಳಿAದ ಕೂಡಿದ್ದವು. ಆದರಿಂದು ಅದಕ್ಕೆ ಅಪವಾದವೆಂಬAತೆ ಅಂತಹ ಯಾವ ಚಟುವಟಿಕೆಯೂ ಕಂಡು ಬರದೆ ಈರ್ವರೂ ನಾಯಕರ ನಡುವಿನ ಶೀತಲ ಸಮರ ತಹಬದಿಗೆ ಬಂದಿದೆ ಎಂಬ ಲಕ್ಷಣಗಳು ಗೋಚರವಾಗಿದ್ದಂತೂ ನಿಜ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಪ್ಪು ಬೆಂಬಲಿಗರು ಮತ್ತು ಮಾಜಿ ಕಾರ್ಪೊರೇಟರ್‌ಗಳು ಶಾಸಕ ಯತ್ನಾಳ ಅವರೂ ತಮ್ಮ ನಾಯಕರು. ಅವರೊಬ್ಬ ರಾಜ್ಯದ ಪ್ರಮುಖ ನಾಯಕ. ಜಿಲ್ಲೆಯಲ್ಲಿ ತಮ್ಮ ನಾಯಕ ಅಪ್ಪು ಪಟ್ಟಣಶೆಟ್ಟಿ ಅವರಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದ್ದಾರೆ. ಹೀಗಾಗಿ ಅವರು ಬೇರೆಡೆಯಿಂದ ಸ್ಪರ್ಧಿಸಿದರೆ ಪಕ್ಷಕ್ಕೆ ಹೆಚ್ಚು ಲಾಭ ಎಂದರು.
ಶಾಸಕ ಯತ್ನಾಳ ಅವರ ಅಭಿವೃದ್ಧಿ ಕೆಲಸಗಳನ್ನು ಒಪ್ಪಿಕೊಂಡ ಇವರು ಅಪ್ಪು ಪಟ್ಟಣಶೆಟ್ಟಿ ಅವರ ಅವಧಿಯಲ್ಲಿಯೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಆಗ ಅದಕ್ಕೆ ಹೆಚ್ಚಿನ ಪ್ರಚಾರ ನೀಡಿರಲಿಲ್ಲ ಎಂದು ಟಾಂಗ್ ಕೊಟ್ಟರು.
ಪಕ್ಷವು ಈರ್ವರೂ ನಾಯಕರಲ್ಲಿ ವಿಜಯಪುರ ನಗರ ಕ್ಷೇತ್ರಕ್ಕೆ ಯಾರಿಗೇ ಟಿಕೆಟ್ ಕೊಟ್ಟರೂ ತಾವು ಪಕ್ಷದ ನಿರ್ಣಯಕ್ಕೆ ಬದ್ಧರಾಗಿರುವುದಾಗಿ ಸ್ಪಷ್ಠಪಡಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment