ಕೊಲ್ಹಾರ: ಪಟ್ಟಣದ ದಿಗಂಬರೇಶ್ವರ ಸಂಸ್ಥಾನ ಮಠದ ದಿಗಂಬರೇಶ್ವರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿAದ ಗುರುವಾರ ದಿವಸ ತಡರಾತ್ರಿ ಜರುಗಿತು.
ಅಂದು ನಸುಕಿನ ಜಾವ ೪ ಗಂಟೆಯಿAದ ಮುಂಜಾನೆ ೯ ಗಂಟೆಯವರೆಗೆ ತಮ್ಮ ಇಷ್ಟಾರ್ಥ ಸಿದ್ದಿಸಿದ್ದಕ್ಕಾಗಿ ಹಾಗೂ ಹರಕೆಯನ್ನು ತೀರಿಸಲು ಧೀರ್ಘ ದಂಡ ಪ್ರಣಾಮ ಸೇವೆಯನ್ನು ಭಕ್ತರು ಸಲ್ಲಿಸಿದರು. ದಿಗಂಬರೇಶ್ವರ ಮಠದ ರಥದ ಕಳಸಾರೋಹಣ ನಡೆದ ಬಳಿಕ ಸಾಯಂಕಾಲ ಬೀಳಗಿ ತಾಲೂಕಿನ ಡವಳೇಶ್ವರ ಗ್ರಾಮದ ಭಕ್ತರು ತಂದ ತೇರಿನ ಹಗ್ಗದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠಕ್ಕೆ ಆಗಮಿಸಿತು.
ನಂತರ ಭಕ್ತರ ಉದ್ಘೋಷದೊಂದಿಗೆ ಹಷೋದ್ಘಾರಗಳೊಂದಿಗೆ ಪೀಠಾಧಿಕಾರಿಗಳಾದ ಕಲ್ಲಿನಾಥ ದೇವರು ಮೂರ್ತಿಯೊಂದಿಗೆ ರಥದಲ್ಲಿ ಕುಳಿತುಕೊಂಡ ಬಳಿಕ ತೇರು ಎಳೆಯುವ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಭಕ್ತರು ರಥೋತ್ಸವಕ್ಕೆ ಉತ್ತತ್ತಿ ಹಾಗೂ ಬಾಳೆ ಹಣ್ಣುಗಳನ್ನು ಹಾರಿಸುವ ಮೂಲಕ ಭಕ್ತಿ ಸೇವೆ ಸಲ್ಲಿಸಿದರು. ಅತ್ಯಂತ ಜಾಗೃತಿಯಿಂದ ರಥೋತ್ಸವ ನೆರವೇರಿತು.
ಮಠಾಧೀಶರು, ಸತ್ಯಜೀತ ಶಿವಾನಂದ ಪಾಟೀಲ, ಕಲ್ಲು ದೇಸಾಯಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಚನಮಲ್ಲಪ್ಪ ಗಿಡ್ಡಪ್ಪಗೋಳ, ಟಿ.ಟಿ.ಹಗೇದಾಳ, ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ದುರೀಣರು, ಗಣ್ಯರು ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪೋಲೀಸ್ ಇಲಾಖೆಯವರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.
ರಾತ್ರಿ ಸೊನ್ನ ಗ್ರಾಮದ ಕಲಾವಿದರಿಂದ ದೀಪಾವಳಿ ಎಂಬ ಬೈಲಾಟವು ಮಠದ ಆವರಣದಲ್ಲಿ ಪ್ರದರ್ಶನಗೊಂಡಿತು.
Subscribe to Updates
Get the latest creative news from FooBar about art, design and business.
Related Posts
Add A Comment