ತಾಳಿಕೋಟಿ: ನನಗೆ ಸಿಕ್ಕ ಈ ೫ ವರ್ಷಗಳಲ್ಲಿ ಸುಮಾರು ರೂ.೩೭೦೦ ಕೋಟಿ ಅನುದಾನವನ್ನು ತಂದು ಇಡೀ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿದ್ದೇನೆ. ತಾಳಿಕೋಟಿ ಪಟ್ಟಣದ ವಿಶೇಷ ಅಭಿವೃದ್ಧಿಗಾಗಿ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡಿದ್ದೇನೆ. ಈ ನಗರವನ್ನು ಒಂದು ಐತಿಹಾಸಿಕ ಪ್ರವಾಸಿ ಕೇಂದ್ರವನ್ನಾಗಿ ಮಾಡುವುದು ನನ್ನ ಮುಂದಿನ ಗುರಿಯಾಗಿದೆ. ಇದಕ್ಕಾಗಿ ನೀವು ಮೊತ್ತಮ್ಮೆ ಆಶೀರ್ವಾದ ಮಾಡಿ ಎಂದು ಶಾಸಕ ಎ. ಎಸ್. ಪಾಟೀಲ (ನಡಹಳ್ಳಿ) ಮನವಿ ಮಾಡಿದರು.
ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠ ಹಾಗೂ ಪಂಚಶಹೀದ ದರ್ಗದಲ್ಲಿ ಪಕ್ಷದ ಮುಖಂಡರು, ಅಭಿಮಾನಿ ಪ್ರಮುಖರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾನು ಈ ಚುನಾವಣೆಯನ್ನು ವಾಸ್ತವಿಕತೆ ನೆಲೆಯಲ್ಲಿ ಎದುರಿಸುತ್ತಿದ್ದೇನೆ. ನಾನು ಮಾಡಿದ ಕೆಲಸಗಳ ಕಿರುಹೊತ್ತಿಗೆಯನ್ನು ನನ್ನ ಆಭಿಮಾನ ಬಳಗ ಹೊರತಂದಿದೆ. ಅದನ್ನು ಪ್ರತಿಮನೆಗೆ ತಲುಪಿಸುವ ಕೆಲಸ ಮಾಡುತ್ತೇನೆ. ಇದು ಎ.ಎಸ್.ಪಾಟೀಲ ಚುನಾವಣೆ ಆಗಿರದೆ ಈ ಮತಕ್ಷೇತ್ರದ ೨.೧೦ ಲಕ್ಷ ಮತದಾನರ ಆಭಿವೃದ್ದಿಗೊಸ್ಕರ ನಡೆಯುವ ಚುನಾವಣೆ. ಈಗಾಗಲೇ ಎದುರಿಸಿದ ೩ ಚುನಾವಣೆಗಿಂತಲೂ ಈ ಬಾರಿ ಅತಿ ಹೆಚ್ಚು ಅಂತರದಿAದ ಗೆಲ್ಲುತ್ತೇನೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ನನಗೆ ಇರಲಿ ಎಂದರು.
ಮುಸ್ಲೀಮ್ ಸಮಾಜದ ಮುಖಂಡ ಖಾಜಾಹುಸೇನ ಡೋಣಿ ಮಾತನಾಡಿ ಶಾಸಕ ನಡಹಳ್ಳಿ ಜಾತ್ಯಾತೀತ ನಾಯಕ, ಎಲ್ಲಿ ಸಮಾಜದವರನ್ನು ಒಗ್ಗೊಡಿಸಿಕೊಂಡು ಹೋಗುತ್ತಿದ್ದಾರೆ ವಿಶೇಷವಾಗಿ ಅಲ್ಪಸಂಖ್ಯಾತರಿಗೆ ಸಾಕಷ್ಡು ಸಹಾಯವನ್ನು ಅವರು ಮಾಡಿದ್ದಾರೆ. ಅವರು ಮಾಡಿದ ಆಭಿವೃದ್ಧಿ ಕಾರ್ಯಗಳೇ ಅವರ ಗೆಲುವಿಗೆ ಶ್ರೀ ರಕ್ಷೆ ಆಗಲಿವೆ ಎಂದರು.
ಈ ಸಮಯದಲ್ಲಿ ಮುಖಂಡರಾದ ಕಾಶೀನಾಥ ಮುರಾಳ, ವಾಸುದೇವ ಹೆಬಸೂರ, ಎಂ.ಎಸ್.ಸರಶೆಟ್ಟಿ, ನಿರಂಜನಶಾ ಮಕಾನಧಾರ, ಕಾಶೀನಾಥ ಸಜ್ಜನ, ರಾಜಅಹ್ಮದ್ ಒಂಟಿ, ಜಯಸಿಂಗ್ ಮೂಲಿಮನಿ, ಶಿವಶಂಕರ ಹಿರೇಮಠ, ನಿಂಗು ಕುಂಟೋಜಿ, ರವಿ ಕಟ್ಟಿಮನಿ, ರತನ್‌ಸಿಂಗ್ ಕೊಕಟನೂರ, ಬಸನಗೌಡ ವಣಿಕ್ಯಾಳ್, ರಾಜುಗೌಡ ಗುಂಡಕನಾಳ, ಮುದಕಪ್ಪ ಬಡಿಗೇರ, ಗಂಗು ಕೊಕಟನೂರ, ಬೇಜಾನಲಿ ನೀರಲಗಿ, ಪ್ರಭು ಬಿಳೇಭಾವಿ, ರಾಜು ಸೊಂಡೂರ, ಬಾಬು ಕಾರಜೋಳ ಇದ್ದರು.
Subscribe to Updates
Get the latest creative news from FooBar about art, design and business.
ಭವಿಷ್ಯದ ಅಭಿವೃದ್ಧಿಗಾಗಿ ಮತ್ತೊಮ್ಮೆ ಆಯ್ಕೆ ಮಾಡಿ :ಶಾಸಕ ನಡಹಳ್ಳಿ
Related Posts
Add A Comment