ಕೆ.ಆರ್.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಯಡಹಳ್ಳಿ ವಿನೂತನ ಪ್ರತಿಭಟನೆ
ದೇವರ ಹಿಪ್ಪರಗಿ: ಅಕ್ರಮ ಮರಳುಗಾರಿಕೆ ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಜಿಲ್ಲಾದ್ಯಕ್ಷ ಹಾಗೂ ದೇವರ ಹಿಪ್ಪರಗಿ ಮತಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾದ ಶಿವಾನಂದ ಯಡಹಳ್ಳಿ ಅವರು ವಿನೂತನವಾಗಿ ಪ್ರತಿಭಟಿಸಿದ ಘಟನೆ ಬುಧವಾರ ನಡೆದಿದೆ.
ಪಟ್ಟಣದ ಮೊಹರೆ ಹನುಮಂತರಾಯ ವೃತ್ತದಿಂದ ದೇವರ ಹಿಪ್ಪರಗಿ ಪೊಲೀಸ್ ಠಾಣೆಯವರೆಗೂ ಶಿವಾನಂದ ಅವರು ರಸ್ತೆಯಲ್ಲಿ ದೀರ್ಘದಂಡ ನಮಸ್ಕಾರ (ಉರುಳುಸೇವೆ) ಹಾಕುತ್ತ ಹೋಗಿ ಪೊಲೀಸರಿಗೆ ಸನ್ಮಾನ ಮಾಡಿದರು.
ನಂತರ ಮಾತನಾಡಿದ ಅವರು, ಇನ್ನು ಮುಂದಾದರೂ ಪ್ರಾಮಾಣಿಕವಾಗಿ ಜೀವನ ಸಾಗಿಸುತ್ತ ಅಕ್ರಮ ಮರಳುಗಾರಿಕೆಯನ್ನು ಸಂಪೂರ್ಣ ತಡೆಗಟ್ಟುವಂತೆ ಮನವಿ ಮಾಡಿಕೊಂಡರು.

ಈ ಹಿಂದೆ ಕಳೆದ ಒಂದು ತಿಂಗಳುಗಳಿAದ ಅಕ್ರಮ ಮರಳುಗಾರಿಕೆ ತಡೆಗಟ್ಟುವಂತೆ ದೇವರಹಿಪ್ಪರಗಿ ಪೋಲಿಸ್ ಠಾಣೆಗೆ ಕರ್ನಾಟಕ ರಾಷ್ಟç ಸಮಿತಿ ಪಕ್ಷವು ಮನವಿಯನ್ನು ಸಲ್ಲಿಸಲಾಗಿದ್ದು, ಠಾಣೆಯ ಪೊಲೀಸ್ ಅಧಿಕಾರಿಗಳಿಂದ ಯಾವುದೇ ಕ್ರಮ ಇಲ್ಲಿಯವರೆಗೂ ಆಗಿರುವುದಿಲ್ಲ. ಕಳೆದ ೧೫ ದಿನದ ಹಿಂದೆ ಅಕ್ರಮ ಮರುಳುಗಾರಿಕೆ ನಡೆಸುವಾಗ ಕೆಸರಟ್ಟಿ ಗ್ರಾಮದ ಬಳಿಯಲ್ಲಿ ಮರಳು ಸಾಗಿಸುವಾಗ ಟಿಪ್ಪರ ಪಲ್ಟಿಯಾಗಿ ಒಬ್ಬ ಕಾರ್ಮಿಕ ಮೃತಪಟ್ಟಿರುತ್ತಾನೆ. ಈ ಪ್ರಕರಣವು ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುತ್ತದೆ. ಈ ಕುರಿತು ಪಕ್ಷದ ಕಾರ್ಯಕರ್ತರು ದೂರವಾಣಿ ಕರೆ ಮಾಡುವುದರ ಮೂಲಕ ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದರೂ ಸಹ ಇಲ್ಲಿವರೆಗೂ ದಾಳಿ ಮಾಡಿರುವುದಿಲ್ಲ ಎಂದು ಶಿವಾನಂದ ಕಿಡಿಕಾರಿದರು.