ವಿಜಯಪುರ: ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ಎಲ್ಲ ಜಾತಿ-ಜನಾಂಗದವರನ್ನು ಪ್ರೀತಿಯಿಂದ ಕಾಣುವ ವ್ಯಕ್ತಿತ್ವ ಉಳ್ಳವರು. ಎಲ್ಲ ಸಮಾಜಗಳೊಂದಿಗೆ ಅನೋನ್ಯತೆ ಹೊಂದಿದವರು. ಈ ಬಾರಿ ಚುನಾವಣೆಗೆ ವಿಜಯಪುರ ನಗರ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಟಿಕೆಟನ್ನು ಪಕ್ಷವು ಅಪ್ಪು ಅವರಿಗೆ ನೀಡಬೇಕೆಂದು ವಿವಿಧ ಸಮಾಜದ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.
ಮಂಗಳವಾರ ನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾವೆಲ್ಲ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ಸತತ ದುಡಿದವರು. ನಮ್ಮಂಥ ಕಾರ್ಯಕರ್ತರ ದುಡಿಮೆ ಫಲದಿಂದ ಪಕ್ಷ ಇಂದು ಹೆಮ್ಮರವಾಗಿ ಬೆಳೆದಿದೆ. ನಗರ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ತಮ್ಮನ್ನು ಅರ್ಪಿಸಿಕೊಂಡ ಅಪ್ಪು ಪಟ್ಟಣಶೆಟ್ಟಿ ಅವರಿಗೆ ಪಕ್ಷ ಟಿಕೆಟ್ ಕೊಡಬೇಕು. ಈ ಹಿಂದೆ ಎರಡು ಸಲ ಅವರಿಗೆ ಟಿಕೆಟ್ ಕೈ ತಪ್ಪಿದರೂ ಸಹ ಅಪ್ಪು ಅವರು ಪಕ್ಷ ನಿಷ್ಠರಾಗಿಯೇ ಮುಂದುವರೆದಿದ್ದಾರೆ. ಕಾರ್ಯಕರ್ತರ ಒಲವು ಸಂಪಾದಿಸಿ ಅವರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಆದರೆ ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾರ್ಯಕರ್ತರ ಕಡೆಗಣನೆ ಮಾಡಿದ್ದಲ್ಲದೆ, ಅನ್ಯ ಸಮುದಾಯಗಳ ಕುರಿತು ಕೇವಲವಾಗಿ ಮಾತನಾಡುತ್ತಾರೆ. ಕಾರಣ ಈ ಬಾರಿ ಪಕ್ಷದ ಟಿಕೆಟ್ ಶಾಸಕ ಯತ್ನಾಳರಿಗೆ ಕೊಡದೆ, ಸರ್ವ ಸಮಾಜದ ನಾಯಕರಾದ ಅಪ್ಪು ಪಟ್ಟಣಶೆಟ್ಟಿಗೆ ನೀಡಬೇಕೆಂದು ಒತ್ತಾಯಿಸಿದರು.
ಮಾದಿಗ ಸಮಾಜದ ಮುಖಂಡ ಹಣಮಂತ ರಾ ಬಿರಾದಾರ, ಗಾಣಿಗ ಸಮಾಜದ ಮುಖಂಡ ಬಸವರಾಜ ಹಳ್ಳಿ, ಬಣಜಿಗ ಸಮಾಜದ ಮುಖಂಡ ಸುನಿಲ್ ರಬಶೆಟ್ಟಿ ಮಾತನಾಡಿದರು.
ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗದ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ಉಪ್ಪಾರ, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅನೀಲ ಉಪ್ಪಾರ, ಗೊಂದಳಿ ಸಮಾಜದ ಜಿಲ್ಲಾಧ್ಯಕ್ಷ ತುಳಸಿರಾಮ್ ಕಾಳೆ, ಹರಳಯ್ಯ ಸಮಾಜದ ರಾಜ್ಯಾಧ್ಯಕ್ಷ ಲಖನ್ ಅರ್ದಾವೂರ, ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಸತೀಶ ನಡುಮನಿ, ಬಣಜಿಗ ಸಮಾಜದ ಬುದ್ಧಪ್ಪ ಹುನ್ನೂರ, ಮಾತಂಗ ಸಮಾಜದ ನಗರ ಉಪಾಧ್ಯಕ್ಷ ಲಲನ್ ದೇವಕುಳೆ, ವಿನೋದ ಆಳೂರ ಇದ್ದರು.
Related Posts
Add A Comment