ಬೀದರ ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಮಾರ್ಗ ಒಂದೆ ಸುಲಭ ಮಾರ್ಗ
ಎಂದು ವೇದಮೂರ್ತಿ ಚೆನ್ನವೀರಸ್ವಾಮಿ ಹಿರೇಮಠ, ಕಡಣಿ ಹೇಳಿದರು.
ಬೀದರ ತಾಲೂಕಾ ಸುಕ್ಷೇತ್ರ ಶ್ರೀ ಗುರುಭದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದಂಗವಾಗಿ ಹಮ್ಮಿಕೊಂಡಿರುವ ಭಕ್ತಿ ವಿಜಯ ಆಧ್ಯಾತ್ಮಿಕ ಪ್ರವಚನದಲ್ಲಿ ಅವರು ಹೇಳಿದರು.
ಭಗವಂತನನ್ನ ಕೂಡಿಕೊಳ್ಳಲು ಭಕ್ತಿ, ಜ್ಞಾನ, ವೈರಾಗ್ಯ ಮೂರು ದಾರಿಗಳು ಇದ್ದರೂ ಕೂಡ ವೈರಾಗ್ಯ ಮತ್ತು ಜ್ಞಾನಮಾರ್ಗದಲ್ಲಿ ಎಲ್ಲರಿಗೂ ಸಾಗಲು ಸಾಧ್ಯವಿಲ್ಲ, ಆದರೆ ಭಕ್ತಿ ಮಾರ್ಗದಲ್ಲಿ ಎಲ್ಲರೂ ಸುಲಭವಾಗಿ ಭಗವಂತನನ್ನ ಸಾಕ್ಷಾತ್ಕಾರ ಮಾಡಿಕೊಳ್ಳಲಿಕ್ಕೆ ಸುಲಭ ಮಾರ್ಗವಿದೆ. ಅಂತಹ ಭಕ್ತಿ ಮಾರ್ಗದಲ್ಲಿ ಗುರು ಭದೇಶ್ವರರು, ಬಸವಾದಿ ಪ್ರಮಥರು ನಡೆದು ತೋರಿಸಿದ್ದಾರೆ. ಅವರ ಮಾರ್ಗ ನಮಗೆ ಅನುಕರಣೀಯ ಕಾರಣ ನಾವು ನೀವೆಲ್ಲ ಸರಳ ಮಾರ್ಗವಾದ ಭಕ್ತಿ ಮಾರ್ಗವನ್ನು ಅನುಸರಿಸಿ ನಮ್ಮ ಜೀವನವನ್ನು ಸಾಫಲ್ಯ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು
ದಿನಾಂಕ 02 .4.2023 ರಿಂದ 06.4. 2023 ವರೆಗೆ ಜಾತ್ರಾ ನಿಮಿತ್ಯ ಹಮ್ಮಿಕೊಂಡಿರುವ ಆಧ್ಯಾತ್ಮ ಭಕ್ತಿ ವಿಜಯ ಆಧ್ಯಾತ್ಮ ಪ್ರವಚನದ ಲಾಭವನ್ನು ಆಸ್ತಿಕರು ಪಡೆದುಕೊಳ್ಳಲು ತಿಳಿಸಿದರು.
ಶ್ರೀಗುರು ಭದೇಶ್ವರ ಸಂಸ್ಥಾನದ ವಂಶ ಪರಂಪರೆಯ ಗುರುಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಾರಂಭದಲ್ಲಿ ವೇದಮೂರ್ತಿಗಳಾದ ಬಾಲ ಸಂಗಯ್ಯ ಸ್ವಾಮಿ, ಶಿವಕುಮಾರ ಸ್ವಾಮಿ, ಭದ್ರಯ್ಯ ಸ್ವಾಮಿ, ಗುರುಭದ್ರೇಶ್ವರ ಸಂಸ್ಥಾನ ಬಾವುಗಿ ಉಪಸ್ಥಿತರಿದ್ದರು.
ಪ್ರವಚನದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಬೀದರ್ ಸಂಗೀತ ಸೇವೆ, ಪವನ್ ಕುಮಾರ್ ಸ್ವಾಮಿ ಕಾಶಂಪುರ್ ತಬಲಾ ಸಾಥ ನೀಡಿದರು.
ಶ್ರೀ ಭದ್ರೇಶ್ವರ ಸಂಸ್ಥಾನದ ಶಾಂತಕುಮಾರ ಸ್ವಾಮಿ ಸ್ವಾಗತಿಸಿದರು.
ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಮಾರ್ಗವೊಂದೇ ಸುಲಭ ಮಾರ್ಗ :ಚನ್ನವೀರ ಶ್ರೀ
Related Posts
Add A Comment