ಮೋರಟಗಿ: ದ್ವಿಚಕ್ರ ವಾಹನ, ಆಟೋರಿಕ್ಷಾ, ಕಾರು, ಜೀಪುಗಳು ಸೇರಿದಂತೆ ಸರ್ಕಾರಿ ಬಸ್ಸುಗಳ ಮೇಲೂ ಕೂಡಾ ಹದ್ದಿನ ಕಣ್ಣಿಟ್ಟಿರಬೇಕು ಎಂದು ತಹಸಿಲ್ದಾರ ಸುರೇಶ ಚಾವಲರ್ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಮೋರಟಗಿ ಚೆಕ್ ಪೋಸ್ಟಗೆ ಭೇಟಿ ನೀಡಿ ವಾಹನಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಸ್ಥಳೀಯ ದ್ವಿಚಕ್ರ ವಾಹನ ಅಥವಾ ಕಾರು ಮೋಟಾರುಗಳ ಚಾಲಕರು ಪರಿಚಿತರಂತೆ ವರ್ತಿಸಿ ಪಾರಾಗುತ್ತಾರೆ ಹಂತವರ ವಾಹನಗಳು ಮುದ್ದಾಮ ಮುಲಾಜ ಇಲ್ಲದೆ ವಾಹನ ಪರಿಶೀಲಿಸಿ ಎಂದು ಹೇಳಿದ ಅವರು ಸುಮಾರು ೬ ಘಂಟೆಗಳ ಕಾಲ ಚೆಕ್ ಪೋಸ್ಟನಲ್ಲೆ ಖುದ್ದಾಗಿ ಸುಮಾರು ವಾಹನಗಳನ್ನು ಪರಿಶೀಲಿಸಿದರು. ಪರಿಶೀಲನೆಯಲ್ಲಿ ಒಂದು ವಾಹನದಲ್ಲಿ ಒಬ್ಬ ರೈತನ ಹತ್ತಿರ ಎರಡು ಲಕ್ಷ ನಗದು ಹಣ ಸಿಕ್ಕಿದ್ದು ಅದು ಹತ್ತಿ ಮಾರಾಟ ಮಾಡಿದ ಅಧಿಕೃತ ಪಾವತಿ ಇರುವುದರಿಂದ ಮರಳಿ ಹಣ ನೀಡಿದರು.
ವಾಹನ ಪರಿಶೀಲನೆ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಸಿದ್ರಾಮ್ ಮಾರಿಹಾಳ, ಎಇಇ ರಾಜಪ್ಪ ಎಸ್, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ, ಗ್ರಾಮ ಲೆಕ್ಕಾಧಿಕಾರಿ ಮಾರುತಿ ಸಾಳಂಕಿ, ಪೊಲೀಸ್ ಸಿಬ್ಬಂದಿಗಳಾದ ಆರ್ ಐ ರೊಳ್ಳಿ, ನಿಂಗಣ್ಣ ಪೂಜಾರಿ, ಅನಿಲ್ ಕುಂಬಾರ್, ಗ್ರಾಮ ಸಹಾಯಕ ವಿಶ್ವನಾಥ ವಾಲಿಕಾರ ಇದ್ದರು
Subscribe to Updates
Get the latest creative news from FooBar about art, design and business.
Related Posts
Add A Comment