ವಿಜಯಪುರ: ಕಾರ್ಯಕರ್ತರ ಮೂಲಕವೇ ಅಭಿಪ್ರಾಯ ಸಂಗ್ರಹಿಸಿ, ಮುಕ್ತ ಮತದಾನ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡುವ ಹೊಸ ಪ್ರಯೋಗವನ್ನು ಭಾರತೀಯ ಜನತಾ ಪಕ್ಷ ಮಾಡಿರುವುದು ಒಂದು ಹೊಸ ಮೈಲುಗಲ್ಲು, ಈ ಪ್ರಕ್ರಿಯೆಯಿಂದ ಕಾರ್ಯಕರ್ತರ ಉತ್ಸಾಹ ಹಾಗೂ ಜನರ ವಿಶ್ವಾಸ ಪಕ್ಷದ ಮೇಲೆ ಮತ್ತಷ್ಟು ಹೆಚ್ಚಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರ್ಯಕರ್ತರು ಪಕ್ಷದ ಆಸ್ತಿ ಹಾಗೂ ಜೀವಾಳ, ಈ ಮಾತನ್ನು ಎಲ್ಲ ರಾಜಕೀಯ ಪಕ್ಷಗಳು ಹೇಳುತ್ತವೆ, ಆದರೆ ಇದನ್ನು ಉಸಿರಾಗಿಸಿಕೊಂಡು,ನೈಜವಾಗಿಯೂ ಕಾರ್ಯಕರ್ತರಿಗೆ ಮಹತ್ವ ನೀಡುವ ಪಕ್ಷ ಬಿಜೆಪಿ ಎಂಬುದು ಸಾಬೀತಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ಕಾರ್ಯಕರ್ತರ ಅಭಿಪ್ರಾಯವೇ ಮಾನದಂಡ ಎಂಬ ಸೂತ್ರ ವನ್ನು ಅನುಸರಿಸಿರುವುದು ಅತ್ಯಂತ ಮಹತ್ವದ್ದಾಗಿದೆ, ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಕಾರ್ಯಕರ್ತರಿಗೆ ಜನರ ನಾಡಿಮಿಡಿತ ಅರಿತಿರುತ್ತಾರೆ, ಕಾರ್ಯಕರ್ತರೇ ಗುಪ್ತ ಮತದಾನ ಮೂಲಕ ಪಾರದರ್ಶಕವಾಗಿ ಅಭ್ಯರ್ಥಿಗಳ ಆಯ್ಕೆ ಮಾಡುವ ವ್ಯವಸ್ಥೆ ಕೇವಲ ಕಾರ್ಯಕರ್ತರಲ್ಲಿ ಅಷ್ಟೇ ಅಲ್ಲದೇ ಜನತೆಯಲ್ಲೂ ಬಿಜೆಪಿ ಬಗ್ಗೆ ಹೊಸ ವಿಶ್ವಾಸ ಮೂಡಿಸಿದೆ. ಕಾರ್ಯಕರ್ತರು ಅಭಿಪ್ರಾಯವನ್ನು ಸಂಗ್ರಹಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮಾಡುವುದು ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಕಾರಜೋಳ ಸಂತೋಷ ವ್ಯಕ್ತಪಡಿಸಿದ್ದಾರೆ.
Related Posts
Add A Comment