ನಗು ಎಂಬುದು ಎಂತಹ ಕುರೂಪಿಯನ್ನೂ ಸಹ ಸುಂದರವಾಗಿ ಪ್ರಸ್ತುತ ಪಡಿಸಬಲ್ಲದು. ನಗೆಯಲ್ಲಿ ನೂರಾರು ಬಗೆ. ಮುಗ್ಧ ನಗೆ, ಕಿರು ನಗೆ, ಹುಸಿ ನಗೆ, ಶಿಷ್ಟಾಚಾರದ ನಗೆ. ಔಪಚಾರಿಕ ನಗೆ, ಪೆದ್ದು ನಗೆ, ವ್ಯಂಗ್ಯದ ನಗೆ ಹೀಗೆ ಹತ್ತಾರು ಬಗೆಯ ನಗುಗಳಿದ್ದರೂ ಪುಟ್ಟ ಮಗುವಿನ ಕಲ್ಮಶವಿಲ್ಲದ, ನಿರ್ಮಲ ಹೃದಯದ ಕಿರು ನಗೆ ಎಲ್ಲರನ್ನೂ ಸೆಳೆಯುತ್ತದೆ. ನಗುವಿಗಾಗಿ ಹಣ ತೆರಬೇಕಾದ ಸರತಿಯಲ್ಲಿ ಗಂಟೆಗಟ್ಟಲೆ ಕಾದು ಮಿತಿಯಲ್ಲಿ ಕಾರ್ಡ್ ತೋರಿಸಿ ಪಡೆದು ಸ್ವಲ್ಪ ಸ್ವಲ್ಪವೇ ಖರ್ಚು ಮಾಡುವ, ಅಥವಾ ಸಾಲ ಪಡೆಯುವ ಅಗತ್ಯವಿಲ್ಲ. ಮುಕ್ತವಾಗಿ ಭಗವಂತ ಎಲ್ಲರಿಗೂ ಈ ಶಕ್ತಿ ದಯಪಾಲಿಸಿ
” ನೀನೊಂದು ಸಲ ನಕ್ಕು ಪರರನು ನಗಿಸು” ಎಂದಿದ್ದಾನೆ. ಹೃದಯದಲ್ಲಿ ಹುಟ್ಟಿ ಕೆನ್ನೆ ಕಣ್ಣುಗಳಲಿ ಬೆಳಗಿ ತುಟಿಗಳಲ್ಲಿ ಅರಳುವ ನಗು ಶ್ರೇಷ್ಠ. ಬಹಳಷ್ಟು ಬಾರಿ ನಗುವ ಮುಕ್ತ ಅವಕಾಶವಿದ್ದರೂ, ಶ್ರೀಮದ್ ಗಾಂಭಿರ್ಯದಿಂದ ತಾವೂ ಇದ್ದು ಪರರನ್ನೂ ನಗಲು ಸಂಕೋಚ ಪಡುವಂತೆ ಮಾಡುವವರೂ ನಮ್ಮ ಮಧ್ಯೆ ಇರುತ್ತಾರೆ.
ನಗು ಸ್ನಾಯುಗಳನ್ನು ಸಡಿಲಗೊಳಿಸಿ ರಕ್ತ ಸಂಚಾರ ಸುಗಮವಾಗಿಸಿ ಆರೋಗ್ಯವನ್ನು ಮುಕ್ತ ಹಸ್ತದಿಂದ ನೀಡುತ್ತದೆ. ಆ ಮುಕ್ತ ನಗುವನ್ನು ನಿರಾಕರಿಸಿ ಕೃತಕವಾಗಿ ನಗುವ ನಟನೆ ಮಾಡುವ ” ಲಾಫಿಂಗ್ ಕ್ಲಬ್” ಸೇರಿಕೊಂಡು ಚಪ್ಪಾಳೆ ತಟ್ಟುತ್ತಾ ಗಟ್ಟಿಯಾಗಿ ಹ ಹ ಹಾ ಎಂದು ನಗುವವರು ಪಾರ್ಕ್ ಗಳಲ್ಲಿ ಕಾಣಲು ಸಿಗುತ್ತಾರೆ. ನಗು ಬಿಗಿದ ವಾತಾವರಣವನ್ನು ಹಗರಗೊಳಿಸಿ ನಿರಾಳರನ್ನಾಗಿಸುತ್ತದೆ. ಎಲ್ಲಕ್ಕಿಂತಲೂ ಬೆಲೆ ಬಾಳುವ ನಗ ನಗು ಮಾತ್ರ. ನಗುವಿನ ಬೀಚಿಯವರು ಹೇಳಿದಂತೆ “ವಾರದಲ್ಲಿ ಮೂರು ಬಾರಿ ಮಾತ್ರ ನಕ್ಕರೆ ಸಾಕಂತೆ. ಅದು ನಿನ್ನೆ ಇಂದು ಮತ್ತು ನಾಳೆ