ಸಿಂದಗಿ: ಪತ್ರಕರ್ತರ ಬಹು ದಿನದ ಬೇಡಿಕೆಯಾಗಿದ್ದ ಪತ್ರಿಕಾ ಭವನಕ್ಕೆ ಎಸ್.ಎಫ್.ಸಿ ಅನುದಾನದಲ್ಲಿ ರೂ.೨೦ಲಕ್ಷ ಮಂಜೂರು ಮಾಡಲಾಗಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಬುಧವಾರದಂದು ಪಟ್ಟಣದ ಬಸ್ ನಿಲ್ದಾಣದ ಹತ್ತಿರ ನಿರ್ಮಾಣವಾಗಲಿರುವ ಪತ್ರಿಕಾ ಭವನದ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸುದ್ದಿ ಮಾಡುವ ವರಿದಗಾರರಿಗೆ ಒಂದು ನಿರ್ದಿಷ್ಟ ಸ್ಥಳದ ಅವಶ್ಯಕತೆಯಿತ್ತು. ಆ ಬೇಡಿಕೆಯನ್ನು ಈ ದಿನ ಈಡೇರಿಸಿದ್ದೇವೆ. ಮತ್ತು ಅತ ಶೀಘ್ರದಲ್ಲಿ ಈ ಪತ್ರಿಕಾ ಭವನ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ ಮಾತನಾಡಿ, ಪತ್ರಿಕಾ ಭವನಕ್ಕೆ ಪುರಸಭೆ ವತಿಯಿಂದ ಕಾಂಪೌAಡ್ ನಿರ್ಮಿಸಿಕೊಳ್ಳಲು ರೂ.೫ ಲಕ್ಷ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಶಾಂತೂ ಹಿರೇಮಠ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಪತ್ರಕರ್ತರಾದ ರವಿಚಂದ್ರ ಮಲ್ಲೇದ, ಸುದರ್ಶನ ಜಂಗಣ್ಣಿ, ಮಹಾಂತೇಶ ನೂಲಾನವರ, ಶಿವಾನಂದ ಆಲಮೇಲ, ಗುರುರಾಜ ಮಠ, ಗುಂಡು ಕುಲಕರ್ಣಿ, ರಮೇಶ ಪೂಜಾರ, ರಾಜೂ ಬೈರಿ, ಶಾಂತವೀರ ಹಿರೇಮಠ, ಭೋಜರಾಜ ದೇಸಾಯಿ, ಬಸವರಾಜ ಡೋಣುರ, ಗುತ್ತಿಗೆದಾರ ಶಂಕರ ಬಳ್ಳುಂಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Related Posts
Add A Comment