ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಕರ್ನಾಟಕದ ಹುಲಿಜಂತಿ ಎಂದೇ ಪ್ರಖ್ಯಾತಿ ಪಡೆದಿರುವ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಸಮೀಪವಿರುವ ಸುಕ್ಷೇತ್ರ ಮಾಲಹಳ್ಳಿ ಗ್ರಾಮದ ಆರಾಧ್ಯ ದೈವ ಶ್ರೀ ಮಾಳಿಂಗರಾಯ ದೇವರ ದೀಪಾವಳಿ ಹಬ್ಬದ ಜಾತ್ರೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಸಮಿತಿ ತಿಳಿಸಿದೆ.
ದಿನಾಂಕ 08-11-2026 ರ ರವಿವಾರ ಬೆಳಿಗ್ಗೆ 9ಗಂಟೆಗೆ ಓಪನ್ ಕಬಡ್ಡಿ ಪಂದ್ಯಾವಳಿ ಜರುಗುವುದು ಪ್ರಥಮ ಬಹುಮಾನ ₹11001. ದ್ವಿತೀಯ ₹ 6001.ತೃತೀಯ ₹ 3001. ಚತುರ್ಥ ₹ 1001. ಪ್ರವೇಶ ಶುಲ್ಕ ₹ 500. ನಿಗದಿ ಪಡಿಸಿದೆ.
ದಿನಾಂಕ 09-11-2026 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ರಾಜ್ಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಇರುತ್ತದೆ. ಪ್ರಥಮ ಬಹುಮಾನ ₹ 10001. ದ್ವಿತೀಯ ಬಹುಮಾನ ₹ 5001.ತೃತೀಯ ₹ 2501 ರೂ ಗಳನ್ನು ನೀಡಿ ಸತ್ಕರಿಸಲಾಗುವುದು, ಪ್ರವೇಶ ಶುಲ್ಕ ₹ 200. ನಿಗದಿ ಪಡಿಸಲಾಗಿದೆ.
ದಿನಾಂಕ 11-11-2026 ರ ಬುಧವಾರದಂದು ಬೆಳಿಗ್ಗೆ 10 ಗಂಟೆಗೆ ಭಾರ (ಚೀಲ ಎತ್ತುವ ಸ್ಪರ್ಧೆ) ಜರುಗುತ್ತದೆ ಪ್ರಥಮ ಬಹುಮಾನ ₹ 8001ರೂ ಬೆಳ್ಳಿ ಕಡಗ ದ್ವಿತೀಯ ₹ 4001 ನಿಗದಿಪಡಿಸಿದೆ ಹಾಗೂ ಅದೇ ದಿನ ಮದ್ಯಾಹ್ನ 2 ಗಂಟೆಗೆ ಪ್ರಖ್ಯಾತ ಕುಸ್ತಿಪಟುಗಳಿಂದ ಕುಸ್ತಿ ಪಂದ್ಯಾವಳಿ ಜರುಗುವುದು, ಅಂದು ರಾತ್ರಿ 10 ಗಂಟೆಗೆ ಪ್ರತಿಭಾ ಪುರಸ್ಕಾರ ಹಾಗೂ ಶ್ರೀ ಕರಿಸಿದ್ದೇಶ್ವರ ಕೃಪಾ ಮಾಳಿಂಗರಾಯ ಮಹಿಮೆ ಹಾಗೂ ದೈಗೊಂಡ ಗೌಡರ ದರ್ಬಾರ ಭಂಡಾರದಿಂದ ಉದ್ದಾರ ಎಂಬ ಹಾಲುಮತ ಭಕ್ತಿ ಪ್ರಧಾನವಾದ ಸತ್ಯ ಸಿದ್ದರ ಮಾರ್ಗ ಎಂಬ ನಾಟಕ ಜರುಗುವುದು.
ಈ ಎಲ್ಲಾ ಕಾರ್ಯಕ್ರಮಗಳಿಗೆ ನೆರೆ ರಾಜ್ಯಗಳಿಂದ ಸುತ್ತಮುತ್ತಲಿನ ಜಿಲ್ಲೆಗಳಿಂದ ಗ್ರಾಮಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸಮಿತಿ ಮನವಿ ಮಾಡಿದೆ. ಹಾಗೂ ಜಾತ್ರೆ ಮುಗಿಯುವವರೆಗೂ ಪ್ರತಿದಿನ ಅನ್ನಪ್ರಸಾದ ಇರುತ್ತದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು ಮೊಬೈಲ್ ನಂಬರ್, 8105860255. 9844445728, 9945154343. 9902619811.

