– ಶಿಲ್ಪಾ,ಮೃತ್ಯುಂಜಯ, ಮಿಣಜಿಗಿ.
ಶಿಕ್ಷಕರು
ಧಾರವಾಡ
ಉದಯರಶ್ಮಿ ದಿನಪತ್ರಿಕೆ
ಪ್ರತಿ ಶಿಕ್ಷಕಿಯು ತನ್ನ ಮಕ್ಕಳಿಗೇ ಉತ್ತಮ ಅಮ್ಮಆಗಲು ಬಯಸುತ್ತಾಳೆ. ಅದೇ ರೀತಿ ಮಗು ಮನೆಯಲ್ಲಿರುವುದನ್ನು ತನ್ನ ಜೊತೆ ಆಟ ಆಡಿ ಸಮಯ ಕಳೆಯುವುದನ್ನು ಅಮ್ಮ ತನ್ನೊಂದಿಗೆ ಚೆನ್ನಾಗಿ ಮಾತನಾಡುವುದನ್ನು ತನಗಾಗಿ ಸಮಯ ಮೀಸಲು ಇಡುವುದನ್ನು ತಾನು ಆಡುವ ಮಾತನ್ನು ಅಮ್ಮ ಕೇಳಿಸಿಕೊಂಡು ಖುಷಿಪಡುವ, ನಗು ಮುಖವನ್ನು ನೋಡಲು ಇಷ್ಟಪಡುತ್ತದೆ. ಅಲ್ಲದೆ ಮಗುವಿನ ಜೊತೆಗೆ ಅಮ್ಮ ಕಳೆಯುವ ಸಮಯ ತನಗೆ ಒದಗಿ ಬಂದ ಸುವರ್ಣ ಅವಕಾಶ ಎಂದು ಮಗು ಭಾವಿಸುತ್ತದೆ.
ಅಂತಹದೇ ಒಂದು ಪುಟ್ಟ ಮಗುವಿನ ಕಥೆ ಇದು
ಅಮ್ಮ ಮಗು ಒಂದೇ ಶಾಲೆಯಲ್ಲಿ ತಾಯಿ ಶಿಕ್ಷಕಿಯಾಗಿ, ಮಗು ವಿದ್ಯಾರ್ಥಿಯಾಗಿ ಇರುವಂತಹ ಅವಕಾಶ ಕೆಲ ತಾಯಂದಿರಿಗೆ ಮಾತ್ರ ಲಭಿಸುತ್ತದೆ. ತಾಯಿ ದೊಡ್ಡ ವರ್ಗದ ಭೋದನೆಯಲ್ಲಿ ಶಿಕ್ಷಕಿ(ಅಮ್ಮ). ಮುಂಜಾನೆಯಿಂದ ಸಂಜೆಯವರೆಗೂ ಬಿಡುವಿಲ್ಲದೆ ವರ್ಗಗಳು ನಡೆಯುತ್ತಿರುತ್ತವೆ.
ಅದೇ ಶಾಲೆಯಲ್ಲಿ ವಿದ್ಯಾರ್ಥಿಯಾದ ಮಗು ಪೂರ್ವ ಪ್ರಾಥಮಿಕ ವರ್ಗದಲ್ಲಿ ವ್ಯಾಸಂಗ ಮಾಡುವಾಗ ಮಗುವಿನ ವರ್ಗ ಕೇವಲ ಮಧ್ಯಾಹ್ನದವರೆಗೆ ಮಾತ್ರ ಇದ್ದು ಸಂಜೆಯವರೆಗೂ ಮಗು ಅದೇ ಶಾಲೆಯಲ್ಲಿ ತಾನೊಬ್ಬಳೇ ಕಾಲ ಕಳೆಯುವುದು ಬೇಡ ಎನಿಸಿದಾಗ ಅಮ್ಮನನ್ನು ಮಗು ಪೀಡಿಸುತ್ತದೆ. ಅಮ್ಮ ನಿನಗೆ ಮಧ್ಯಾಹ್ನ ಹೆಚ್ಚಿನ ತರಗತಿ ಇರಬಾರದು ಎಂದು ನಾನು ದೇವರಲ್ಲಿ(ಗಣೇಶ) ನಿಗೆ ಬೇಡಿಕೊಳ್ಳುತ್ತೇನೆ ಎಂದು ಕೇಳಿದಾಗ, ದೈವಲೀಲೆಯೋ ಏನೋ ಕಾಣೆ, ಅಂದು ಅಮ್ಮನಿಗೆ ಹೆಚ್ಚಿನ ವರ್ಗಗಳಿರಲಿಲ್ಲವಂತೆ. ಮಗುವಿನ ಮುಗ್ದ ಮನಸ್ಸಿನ ಮಾತನ್ನು ಕೋರಿಕೆಯನ್ನು ಭಗವಂತ ಸ್ವೀಕರಿಸುತ್ತಾನೆ ಎಂಬುದಕ್ಕೆ ಇದೇ ಸಾಕ್ಷಿ ನೋಡಿ ಎಂದು ಅವರ ತಾಯಿ ನನ್ನ ಹತ್ತಿರ ಹೇಳಿದ ಒಂದು ಚಿಕ್ಕ ಕಥೆಯನ್ನು ನನ್ನ ಶಬ್ದದಲ್ಲಿ ಹಿಡಿದಿಡುವ ಕೆಲಸವನ್ನು ಮಾಡಿದ್ದೇನೆ.
ಅಮ್ಮ ಮಗುವಿನ ಪ್ರೀತಿ ಭಗವಂತನಿಗೂ ಇಷ್ಟ ಎನ್ನುವುದಕ್ಕೆ ಈ ಕಥೆ ಸಾಕ್ಷಿಯಾಗಿದೆ.


