ಮೋರಟಗಿ: ೨೦೨೪ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಗ್ರಾಮದ ಕಲ್ಪವೃಕ್ಷ ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಮಾಡಿದ್ದು ವಿಜ್ನಾನ ವಿಭಾಗದಲ್ಲಿ ೧೭೦ ವಿದ್ಯಾರ್ಥಿಗಳಲ್ಲಿ ೫೪ ವಿದ್ಯಾರ್ಥಿಗಳು ಶೇ ೯೫ ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ ವಾಣಿಜ್ಯ ವಿಭಾಗದಲ್ಲಿ ೩೫ ವಿದ್ಯಾರ್ಥಿಗಳಲ್ಲಿ ೩೦ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ ಪಡೆದುಕೊಂಡಿದ್ದಾರೆ ಮತ್ತು ಕಲಾ ವಿಭಾಗದಲ್ಲಿ ೮೩ ವಿದ್ಯಾರ್ಥಿಗಳಲ್ಲಿ ೪೬ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದುಕೊಂಡಿದ್ದಾರೆ
ವಿಷಯವಾರು, ಜೀವಶಾಸ್ತ್ರ ವಿಷಯದಲ್ಲಿ ೮೬, ಗಣಿತ ವಿಷಯದಲ್ಲಿ ೬೫, ರಾಸಾಯನಶಾಸ್ತ್ರದಲ್ಲಿ ೯, ಭೌತಶಾಸ್ತ್ರದಲ್ಲಿ ೭ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕಗಳನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗ
ಸಾಗರ ದೆಗಿನಾಳ ೫೮೭(೯೭.೮೩%),
ಪರಮೇಶ ೫೮೬(೯೭.೬೭%),
ಸಂಗಮೇಶ ಕೆರುಟಗಿ ೫೮೪(೯೭.೩೩%)
ವಾಣಿಜ್ಯ ವಿಭಾಗ
ಸೋಹೇಲ್ ಮುಲ್ಲಾ ೫೯೦(೯೮.೩೩%),
ಪಲ್ಲವಿ ಪಾರಗೊಂಡ ೫೮೦(೯೬.೬೭%),
ಸೈಯದ ಮುಷರತ್ ಮೈನಾಳ ೫೮೦(೯೬.೬೭%)
ಕಲಾ ವಿಭಾಗ
ಮಂಜುನಾಥ ಬಜಾರೆ ೫೮೮(೯೮%),
ದಾವಲಮಲೀಕ ಪಟೇಲ ೫೮೪(೯೭.೩೩%),
ಭಾಗಣ್ಣ ಪೂಜಾರಿ ೫೭೫(೯೫.೮೩%),
ಉತ್ತಮ ಸಾಧನೆ ಮಾಡಿ ಕಾಲೇಜಿನ ಕೀರ್ತಿ ಹೆಚ್ಚಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರು ಆಡಳಿತ ಮಂಡಳಿ ಅಭಿನಂದನೆಗಳನ್ನು ಸಲ್ಲಿಸಿ ವಿದ್ಯಾರ್ಥಿಗಳ ಜೀವನ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
