ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪಟ್ಟಣದ ಶ್ರೀ ಎ.ಬಿ.ಜತ್ತಿ ಪ್ರೌಢ ಶಾಲೆಯ ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಯಲ್ಲಿ ವೈಷ್ಣವಿ ಮೆಟಗುಡ್ಡ 614 ಅಂಕ ಶೇ. 98.24 (ಪ್ರಥಮ), ತಾರಾಬಾಯಿ ಕಟೆ 594 ಶೇ.95.04 (ದ್ವೀತಿಯ), ಪೂಜಾ ಕಾಳೇಲ 587 ಶೇ.93.92 (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.
2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ಉಪಾಧ್ಯಕ್ಷ ಜಿ. ಕೆ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ, ಆಡಳಿತಾಧಿಕಾರಿ ಆರ್. ವಿ. ಕುಲಕರ್ಣಿ, ಉಪಪ್ರಾಚಾರ್ಯ ಜೆ.ಎಂ. ಪಾಟೀಲ, ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

