ಅಫಜಲಪುರ: ಬಿಜೆಪಿ ಪಕ್ಷದ ಅಫಜಲಪುರ ತಾಲೂಕು ಅಲ್ಪಸಂಖ್ಯಾತರ ಮೋರ್ಚಾಕ್ಕೆ ನೂತನ ಅಧ್ಯಕ್ಷರನ್ನಾಗಿ ಅರ್ಜುಣಗಿ ಗ್ರಾಮದ ಚಾಂದಶೇಕ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ವಿದ್ಯಾಧರ ಮಂಗಳೂರೆ ತಿಳಿಸಿದ್ದಾರೆ.
ಮಹಿಮೂದ ಡಾಂಗೆ, ಅಕ್ಬರ ನಬಿಸಾಬ್ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ. ಅನ್ವರ ಖಾಜಿಮೀಯಾ ಶೇಕ್, ಮಹಮದ್ ಆರೀಫ, ರಶೀದ ಪಟೇಲ, ಸೈಫನಸಾಬ ಚೌಧರಿ ಇವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸೊಂದುಸಾಬ ಶೇಕ, ಸದ್ದಾಂ, ಖುದ್ವಾನ ನದಾಫ, ಜೈನಾಬಿ ಇವರನ್ನು ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ. ಖಾಜಾ ಮೈನೂದ್ದೀನ ಮುಲ್ಲಾ ಇವರನ್ನು ಖಜಾಂಚಿಯಾಗಿ ನೇಮಿಸಿ ಪಕ್ಷದ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

