ಚಡಚಣ: ಸಮೀಪದ ಲೋಣಿ ಬಿಕೆ ಗ್ರಾಮದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನು ಮಾ.9 ರಿಂದ ಮಾ.13 ರವರಗೆ 5 ದಿನಗಳ ಕಾಲ ಶ್ರೀ ಸಿದ್ಧೇಶ್ವರ ಜಾತ್ರಾ ಕಾರ್ಯಕ್ರಮಗಳು ಜರುಗಲಿದೆ.
ಮಾ. 9 ಶನಿವಾರ ರಂದು ಮಹಾಶಿವರಾತ್ರಿ ಶಿವಯೋಗ ಪ್ರಯುಕ್ತ ಸಂಜೆ 7 ಗಂಟಗೆ ಸದಭಕ್ತಿ ದೀಪೋತ್ಸವ ಮಂಗಲಕರ ವೈವಿದ್ಯಮಯ ಮಧುರತರ ವಾದ್ಯಗಳೊಂದಿಗೆ ಶ್ರೀ ಸಿದ್ಧೇಶ್ವರ ನಂದಿ ಧ್ವಜದೊಂದಿಗೆ ಪಲ್ಲಕ್ಕಿಯು ಗ್ರಾಮದೊಳಗಿನ ಮಠದಿಂದ ನ್ಯಾಯ, ನೀತಿ ಧರ್ಮವನ್ನೆ ವಿಜಯಿಸುವ ಮಾರ್ಗವಾಗಿ ದೇವಾಲಯದವರೆಗೆ ಮೆರವಣೆಗೆ ಜರಗುವುದು. ಜಾಗರಣೆಯೊಂದಿಗೆ ಭಕ್ತಿ ಭಜನೆಗಳು ಜರಗುವವು.
ಮಾ.10 ರವಿವಾರ ಮಹಾಶಿವಾರಾತ್ರಿ ಅಮವಾಸೆ ಮುಂಜಾನೆ 8.30 ಗಂಟೆಗೆ ಶ್ರೀ ಸಿದ್ಧೇಶ್ವರ ಪಲ್ಲಕ್ಕಿ ಪ್ರದಕ್ಷಿಣೆ. ಮಧ್ಯಾಹ್ನ 12.30 ಗಂಟೆಗೆ ವರ್ಷವಿಡಿ ದುಡಿದ ಸಮಾಜಕ್ಕೆ ಸಂತೋಷಗೊಳಿಸಲು “ ಹರದೇಶೀ-ನಾಗೇಶೀ” ಗೀಗೀ ಪದಗಳು ಜರಗುವವು. ಸಂಜೆ 5 ಗಂಟೆಗೆ ಸರ್ವ ಶಿವಚಾರ್ಯರ ಅಮೃತ ಹಸ್ತದಿಂದ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರಗುವುದು.
ಮಾ.11 ಸೋಮವಾರ ಮುಂಜಾನೆಯಿಂದ ಗೀಗೀ ಪದಗಳು ಜರಗುವವು. ಅದೇ ದಿನ ರಾತ್ರಿ ಮನರಂಜಿಸುವ ವರ್ಣರಂಜಿತ “ ಚಿತ್ರ ವಿಚಿತ್ರ ಮದ್ದು” ಸುಡಲಾಗುವುದು.
ಮಾ.12 ಮಂಗಳವಾರ ಮುಂಜಾನೆಯಿಂದ ಗೀಗೀ ಪದಗಳು ಜರಗುವವು. ಸಂಜೆ 4 ಗಂಟೆಗೆ “ಜಂಗೀ ನಿಕಾಲಿ ಕುಸ್ತಿಗಳು” ಜರಗುವವು. ರಾತ್ರಿ 10 ಗಂಟೆಗೆ ಶ್ರೀ ಗುರುಚಂದ್ರಶೇಖರ ನ್ಯಾಟ ಸಂಘ ತದ್ದೇವಾಡಿ ಇವರಿಂದ “ ಶ್ರೀ ರೇಣುಕಾದೇವಿ ಮಹಾತ್ಮೆ” ಎಂಬ ಪೌರಾಣಿಕ ಬಯಲಾಟ ನಡೆಯಲಿದೆ.
ಮಾ.13 ಬುಧವಾರ ಉತ್ತಮ ಭಾರೀಖಿಲಾರಿ ಜಾನುವಾರಗಳ ಮಾಲೀಕರು ಪಶು ವೈದ್ಯಾಧಿಕಾರಿಗಳ ಕಡೆಗೆ ಹೆಸರು ಕೊಡುವುದು. ಸಂಜೆ 4 ಗಂಟೆಗೆ ಪಶುವೈದ್ಯಾಧಿಕಾರಿಗಳು ಮತ್ತು ತಜ್ಞ ರೈತರ ಸಹಯೋಗದೊಂದಿಗೆ ಉತ್ತಮ ಜಾನುವಾರಗಳ ಆಯ್ಕೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಿದ್ಧೇಶ್ವರ ಜಾತ್ರಾ ಕಮೀಟಿ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

