ಇಂಡಿ: ಪಟ್ಟಣದ ಟಂ ಟಂ ಸಂಘದವರು ರೇಲ್ವೆ ಸ್ಟೇಷನದ ಕಡೆಗೆ ಹೋಗುವ ಟಂ.ಟಂ ಗಳಿಗೆ ಬಸ್ ನಿಲ್ದಾಣದ ಹತ್ತಿರ ಪಾರ್ಕಿಂಗ ಅಳವಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣ ಮತ್ತು ಟಂ.ಟಂ ಸಂಘಟನೆಯಿಂದ ಪ್ರತಿಭಟನೆ ನಡೆಸಿ ಮಿನಿ ವಿಧಾನಸೌಧ ತೆರಳಿ ತಹಸೀಲ್ದಾರವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಶಿವು ಬಡಿಗೇರ ಮಾತನಾಡಿ, ಪಟ್ಟಣದಿಂದ ರೇಲ್ವೆ ಸ್ಟೇಷನ್ ಕ್ಕೆ ಹಗಲಿನಲ್ಲಿ ಒಂದು ತಾಸಿನಲ್ಲಿ ಕನಿಷ್ಠ ೧೫ ಟಂ ಟಂ ಹೋಗುತ್ತದೆ. ಅದಲ್ಲದೆ ಪ್ರತಿನಿತ್ಯ ಇಂಡಿ ರೇಲ್ವೆ ಸ್ಟೇಷನದಿಂದ ವಿಜಯಪುರ ಸೋಲಾಪುರ, ಬೆಂಗಳೂರ, ಮುಂಬಯಿ, ಹೈದ್ರಾಬಾದ, ಮಂತ್ರಾಲಯ ಕಡೆಗೆ ಹೋಗುವ ರೇಲ್ವೆ ಸಂಖ್ಯೆ ಹೆಚ್ಚಾಗಿದ್ದು ಬೇರೆ ಸ್ಥಳಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಿಗಿದೆ. ಅದಲ್ಲದೆ ಇಂಡಿ ರೇಲ್ವೆ ಸ್ಟೇಷನ್ ದಲ್ಲಿ ಜನವಸತಿಯೂ ಸಾಕಷ್ಟಿದೆ. ಸಧ್ಯ ನಿಲ್ಲುವ ಟಂ ಟಂ ಗಳಿಗೆ ಅಲ್ಲಿ ನಿಲ್ಲಿಸಬೇಡಿ ಎಂದು ಪೋಲಿಸರು ಬಹಳ ಕಿರಿ ಕಿರಿ ಮಾಡುತ್ತಾರೆ. ಹೀಗಾಗಿ ಬಿಎಸ್‌ಎನ್‌ಎಲ್ ಎದುರುಗಡೆ ಅಥವಾ ಎಲ್ಲಿಯಾದರೂ ಖಾಲಿ ಜಾಗದಲ್ಲಿ ಪಾರ್ಕಿಂಗ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಶಿವು ಕೋಳಿ, ಕಿರಣ ಇಂಗಳೆ, ಸುರೇಶ ಹಿರೇಮಠ, ಮಲ್ಲು ಮೇತ್ರಿ, ಶಶಿ ವಾಲಿಕಾರ, ನಬಿಲಾಲ ಬಾಗವಾನ, ಪ್ರದೀಪ ಪವಾರ, ಮಹೇಶ ಅಗಸರ, ಖಾಜಿಸಾಬ ಬಾಗವಾನ, ಈಸಾಬ ಎಕ್ಕೆವಾಲೆ, ಮುತ್ತು ಹೊಸಮನಿ, ಸಮೀರ ಪಟೇಲ, ರಾಕೇಶ ಜಾಧವ, ವಿಠ್ಠಲ ವಾಲಿಕಾರ , ವಾಶೀಮ ಅಷ್ಟೇಕರ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment