ಚಿಮ್ಮಡ: ಅಧಿಕಾರಿಗಳು ಸಾರ್ವಜನಿಕರಿಗೆ ನೀಡುವ ಉತ್ತಮ ಸೇವೆಗಳು ಜನರಲ್ಲಿ ಅವೀಸ್ಮರಣೀಯವಾಗಿ ಉಳಿಯುತ್ತವೆ ಎಂದು ಪಿಕೆಪಿಎಸ್ ಬ್ಯಾಂಕ ನಿರ್ದೆಶಕ ನಿಂಗಣ್ಣ ಪೂಜಾರಿ ಹೇಳಿದರು.
ಚಿಮ್ಮಡ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ಶಾಖಾ ವ್ಯವಸ್ಥಾಪಕ ಎಸ್.ಐ. ಗಡ್ಡಿ ಯವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರಿ ಅಧಿಕಾರಿಗಳು ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಸಾರ್ವಜನಿಕರಲ್ಲಿ ಉತ್ತಮ ಬಾಂಧವ್ಯ ಬೆಳೆಯುತ್ತದೆ ಅಂತಹ ಬಾಂಧವ್ಯವನ್ನು ವ್ಯವಸ್ಥಾಪಕ ಗಡ್ಡಿಯವರು ಸಂಪಾದಿಸಿದ್ದಾರೆ. ಅವರ ಸೇವೆ ಎಲ್ಲ ವಿಭಾಗಕ್ಕೂ ಸಲ್ಲಬೇಕೆಂದರು.
ಕೆವಿಜಿ ಬ್ಯಾಂಕ್ ಗುಮಾಸ್ಥ ಜಹೀರಅಬ್ಬಾಸ ನದಾಫ ಮಾತನಾಡಿ, ಚಿಮ್ಮಡ ಗ್ರಾಮದ ಶಾಖೆಯಲ್ಲಿ ಸೇವೆ ಸಲ್ಲಿಸಿದ ಎಲ್ಲ ಅಧಿಕಾರಿಗಳು ಮುಂಬಡ್ತಿ ಹೊಂದಿಯೇ ವರ್ಗಾವಣೆಗೊಂದಿದ್ದು ಇಲ್ಲಿನ ಜನರ ಸಹಕಾರವೂ ಉತ್ತಮಸೇವೆಗೆ ಸಹಕಾರಿಯಾಗುತ್ತದೆ ಎಂದರು.
ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪಿರಸಾಬ ನದಾಫ, ಸಂಗಮೇಶ ಚಲವಾದಿ, ಇಲಾಹಿ ಜಮಖಂಡಿ ಮಾತನಾಡಿದರು.
ಉದಯ ದೇಶಪಂಡೆ, ಹನೀಫ ಚಿಕ್ಕೋಡಿ, ಶ್ರೀನಿವಾಸ ಬಿಳ್ಳೂರ, ಸಲೀಮ ಸರಕಾವಸ, ಶೌಕತ ಪಾಲಭಾವಿ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುಂಬಡ್ತಿಯೊಂದಿಗೆ ವರ್ಗಾವಣೆಗೊಂಡಿರುವ ಸ್ಥಳಿಯ ಶಾಖಾ ವ್ಯವಸ್ಥಾಪಕ ಸರ್ರಫರಾಜ ಗಡ್ಡಿಯವರನ್ನು ಗ್ರಾಮದ ಪ್ರಮುಖರಿಂದ ಸತ್ಕರಿಸಲಾಯಿತು.
ಲಕ್ಮಣ ಹೊಸೂರ ಸ್ವಾಗತಿಸಿ ನಿರೂಪಿಸಿದರು. ರಮೇಶ ಪತ್ತಾರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment