ಆಲಮೇಲ: ಗ್ರಾಮೀಣ ಭಾಗದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದಿಂದ ಯಾವುದೆ ಸಹಾಯವಿಲ್ಲದೆ ಗುಣಮಟ್ಟದ ಶಿಕ್ಷಣ ನೀಡುವದು ಕಷ್ಟದ ಕೆಲಸ ಎಂಬುದು ಸಂಸ್ಥೆಯವರಿಗೇ ಗೊತ್ತು ಎಂದು ಸಂಸ್ಥೆಯ ಅಧ್ಯಕ್ಷ ಶಿವುಕುಮಾರ ಗುಂದಗಿ ಹೇಳಿದರು.
ಪಟ್ಟಣದ ಗ್ರಾಮೀಣ ಅಭಿವೃದ್ದಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
೧೯೯೨ರಲ್ಲಿ ಆಲಮೇಲದಂತ ಗ್ರಾಮೀಣ ಭಾಗದಲ್ಲಿ ಬಡ ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳುವದನ್ನು ಮನಗಂಡು ಅನೇಕ ಶಿಕ್ಷಣ ಪ್ರೇಮಿಗಳ ಮಾರ್ಗದರ್ಶನ ಸಹಕಾರದ ಮೇರೆಗೆ ಗ್ರಾಮೀಣ ಅಭಿವೃದ್ದಿ ಶಿಕ್ಷಣ ಸಂಸ್ಥೆ ಪ್ರಾರಂಬಿಸಿದ್ದು ಅದಿಂದು ಹೆಮ್ಮರವಾಗಿದೆ. ಇಲ್ಲಿ ಪ್ರಾಥಮಿಕ ದಿಂದ ಮಹಾ ವಿದ್ಯಾಲಯದ ವರೆಗೂ ಶಿಕ್ಷಣ ದೊರೆವಂತ ವ್ಯೆವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸಾನಿದ್ಯ ವಹಿಸಿ ಮಾತನಾಡಿದರು. ಸಿಂದಗಿ ಶಾಸಕ ಅಶೋಕ ಮನಗೂಳಿ ಅವರ ಪತ್ನಿ ನಾಗರತ್ನ ಮನಗೂಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ: ಆಲಮೇಲ ಗ್ರಾಮದವರು ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಾಗಲಕೋಟೆ ಕೆಪಿಟಿಸಿಎಲ್ ಚೀಪ್ ಇಂಜಿನಿಯರ ಕೆ.ಜಿ. ಹಿರೇಮಠ, ಸಾಹಿತ್ಯ ಮತ್ತು ಮಾದ್ಯಮ ಕ್ಷೇತ್ರದ ಬೆರಗು ಪ್ರಕಾಶನದ ಸಂಚಾಲಕ ಡಾ| ರಮೇಶ ಕತ್ತಿ, ವೈದ್ಯಸಾಹಿತಿ, ವ್ಯಂಗ್ಯ ಚಿತ್ರಗಾರ ಡಾ| ಸಮೀರ ಹಾದಿಮನಿ, ಶಾಲೆಯ ಹಳೆಯ ವಿದ್ಯಾರ್ಥಿ ಮಾಧ್ಯಮ ಕ್ಷೇತ್ರದ ವ್ಯಾಸಂಗದಲ್ಲಿ ೯ ಚಿನ್ನದ ಪದಕ ಪಡೆದು ಸುವರ್ಣ ನ್ಯೂಸ್ ಚಾನಲ್‌ನ ಉಪ ಸಂಪಾದಕರಾಗಿ ಸೇವೆಗೈಯುತ್ತಿರುವ ದಾದಾಗೌಡ ಪಾಟೀಲ ಇವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಸಂಸ್ಥೆಯ ಉಪಾಧ್ಯಕ್ಷ ನಿತ್ಯಾನಂದ ಮಹಾರಾಜರು, ಪಿಎಸ್‌ಐ ಕುಮಾರ ಹಾಡಕರ, ಕೆಪಿಆರ್ ಶುರ‍್ಸ್ನ ಎನ್. ಪಾರ್ಥಿಬನ್, ಮಹಿಬೂಬ ಮಸಳಿ, ಸಂಸ್ಥೆಯ ನಿದೇರ್ಶಕರಾದ ಡಾ| ರಾಜೇಶ ಪಾಟೀಲ, ಸಿದ್ದು ಕೊಳಾರಿ, ಸಂಜುಕುಮಾರ ಗುಂದಗಿ, ಸುನೀಲ ಗುಂದಗಿ, ಪಾಲಕ ಪ್ರತಿನಿಧಿಗಳಾದ ಹರೀಶ ಎಂಟಮಾನ, ರಾಮಚಂದ್ರ ಬಂಡಗಾರ ಶಿಕ್ಷಣ ಸಂಯೋಜಕ ಎಂ.ಪಿ. ಬಿಸ್ಸೆ, ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಬಿ. ಬ್ಯಾಡಗಿಹಾಳ, ಗುರುಬಸಪ್ಪ ಗುಂದಗಿ ಕಾಲೇಜಿನ ಪ್ರಾಚಾರ್ಯ ವ್ಹಿ.ಎಸ್. ಹೊಡ್ಲ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಿ.ಕೆ. ಅಂಬೂರೆ, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಸ್.ಆರ್. ಪೂಜಾರಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment