ಮುದ್ದೇಬಿಹಾಳ: ಮೈಸೂರು ರಾಜ್ಯ ಕರ್ನಾಟಕ ಅಂತಾ ನಾಮಕರಣವಾಗಿ ೫೦ರ ಸಂಭ್ರಮ ಆಚರಿಸುತ್ತಿದೆ. ನಮಗೆ ಕನ್ನಡವೇ ಪರಮೋಚ್ಛ ಭಾಷೆ, ಆಡಳಿತ ಭಾಷೆ, ಮಾತೃ ಭಾಷೆ, ಅನ್ನದ ಭಾಷೆಯಾಗಿರುವದರಿಂದ ಕನ್ನಡದ ಇತಿಹಾಸ, ಸಾಹಿತ್ಯ, ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಕಾರ್ಯಕ್ರಮದ ಅಡಿ ರಾಜ್ಯದಾದ್ಯಂತ ಕನ್ನಡದ ರಥ ಸಂಚರಿಸುತ್ತಿದೆ. ಈ ರಥದ ಮೆರವಣಿಗೆಯಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಕನ್ನಡಾಭಿಮಾನಿಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಮೆರವಣಿಗೆಗೆ ಇನ್ನಷ್ಟು ಮೆರಗು ನೀಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಹೇಳಿದರು.
ಪಟ್ಟಣದ ಇಂದಿರಾ ವೃತ್ತದಲ್ಲಿ ಕನ್ನಡ ರಥದ ಅದ್ಧೂರಿ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆ ಶ್ರೀಮಂತಿಕೆ, ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದೆ. ಕನ್ನಡ ನಾಡು, ನುಡಿ, ಜಲ, ನೆಲ ಕಾಪಾಡುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸೋಣ ಎಂದರು.
ತಹಶೀಲ್ದಾರ ಬಸವರಾಜ ನಾಗರಾಳ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ಪ್ರಾಧ್ಯಾಪಕ ಪ್ರಕಾಶ ನರಗುಂದ ಮಾತನಾಡಿದರು. ಪಟ್ಟಣದ ಎಂ.ಜಿ.ವಿ.ಸಿ ಕಾಲೇಜಿನಿಂದ ಶುರುವಾದ ಮೆರವಣಿಗೆ ಅಂಬೇಡ್ಕರ ವೃತ್ತ, ಕೃಷ್ಣಾ ಮಂಗಲ ಕಾರ್ಯಾಲಯ, ಖಾದಿಕೇಂದ್ರ, ಬನಶಂಕರಿ ದೇವಸ್ಥಾನ, ಇಂದಿರಾ ವೃತ್ತ, ಗ್ರಾಮ ದೇವತೆ ದೇವಸ್ಥಾನ ಮುಖ್ಯ ಬಜಾರ, ಬಸವೇಶ್ವರ ವೃತ್ತ ಮಾರ್ಗವಾಗಿ ಅದ್ಧೂರಿಯಾಗಿ ನಡೆಸಿ ನಿಡಗುಂದಿಯತ್ತ ಬೀಳ್ಕೊಡಲಾಯಿತು. ಮೆರವಣಿಗೆಯ ಉದ್ದಕ್ಕೂ ವಿಬಿಸಿ ಹೈಸ್ಕೂಲ್ ವಿಧ್ಯಾರ್ಥಿನಿಯರು ಕೋಲಾಟ ಪ್ರದರ್ಶಿಸಿದರು. ಕುದುರೆ ಕುಣಿತ, ಡೊಳ್ಳು, ತಮಟೆ ವಾದ್ಯಗಳು ಗಮನ ಸೆಳೆದವು. ತಹಶೀಲ್ದಾರ ನಾಗರಾಳ ಸೇರಿದಂತೆ ಪಿಎಸ್‌ಐ ಸಂಜೀವ ತಿಪರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ, ಗಣ್ಯ ವ್ಯಾಪಾರಸ್ಥ ಸಂಗನಗೌಡ ಬಿರಾದಾರ (ಜಿಟಿಸಿ), ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಮಾಜಿ ಸದಸ್ಯ ಕಾಮರಾಜ ಬಿರಾದಾರ, ಮುಖಂಡ ಮಹಾಂತೇಶ ಬೂದಿಹಾಳಮಠ ಇನ್ನೀತರರು ಡೊಳ್ಳು ಹೊತ್ತು ವಾದ್ಯ ನುಡಿಸುವ ಮೂಲಕ ಕನ್ನಡಾಭಿಮಾನ ಮೆರೆದರು.
ಸಿಡಿಪಿಓ ಚಂದ್ರಶೇಖರ ಕುಂಬಾರ, ಸಹಾಯಕ ಕೃಷಿ ನಿರ್ದೇಶಕ ಎಸ್.ಡಿ.ಬಾವಿಕಟ್ಟಿ, ತಾಲೂಕು ಆಡಳಿತ ವೈದ್ಯಾಧಿಕಾರಿ ಸತೀಶ ತಿವಾರಿ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವಾನಂದ ಮೇಟಿ, ಕಸಾಪ ತಾಲೂಕು ಅಧ್ಯಕ್ಷ ಎಂ.ಎಚ್.ಹಾಲಣ್ಣವರ ವಕೀಲರು, ಎಪಿಎಂಸಿ ಸಿರ್ದೇಶಕ ವಾಯ್.ಎಚ್.ವಿಜಯಕರ, ಗುತ್ತಿಗೆದಾರ ರುದ್ರಗೌಡ ಅಂಗಡಗೇರಿ, ಪುರಸಭೆ ನಿಕಟಪೂರ್ವ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸದಸ್ಯರಾದ ಪ್ರೀತಿ ದೇಗಿನಾಳ, ಸಹನಾ ಬಡಿಗೇರ, ಮಹೆಬೂಬ ಗೊಳಸಂಗಿ, ಡಿಎಸ್‌ಎಸ್ ಮುಖಂಡ ಡಿ.ಬಿ.ಮುದೂರ, ಪ್ರಮುಖರಾದ ರಾಜೇಂದ್ರಗೌಡ ರಾಯಗೊಂಡ, ಅಶೋಕ ನಾಡಗೌಡ, ವಿರೇಶ ಗುರುಮಠ, ಪ್ರಶಾಂತ ಕಾಳೆ ಸೇರಿದಂತೆ ಮತ್ತೀತರರು ಭಾಗಿಯಾಗಿ ಮೆರವಣಿಗೆಯನ್ನು ಯಶಸ್ವಿಗೊಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment