ಮೋರಟಗಿ-ಮುತ್ತಗಿಯಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ದೂರಿ ಸ್ವಾಗತ
ವಿಜಯಪುರ: ಭಾರತದ ಸಂವಿಧಾನವು ದಿನವು ಐತಿಹಾಸಿಕ ಹಾಗೂ ಸಾಂಕೇತಿಕ ಮಹತ್ವವನ್ನು ಹೊಂದಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೌರಮ್ಮ ನಡುವಿನಕೇರಿ ಹೇಳಿದರು.
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯನ್ನು ಅದ್ಧೂರಿಯಾಗಿ ಬರಮಾಡಿ ಕೊಳ್ಳಲಾಯಿತು. ಶಾಲಾ ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಿಳೆಯರಿಂದ ಕುಂಭಮೇಳ, ಸಾರ್ವಜನಿಕರು, ವಿದ್ಯಾರ್ಥಿಗಳಿಂದ ಸಂವಿಧಾನ ಪೀಠಿಕೆ ಓದುವುದರ ಮೂಲಕ ಪ್ರಮಾಣ ಮಾಡಲಾಯಿತು. ಸಂವಿಧಾನ ಜಾಗೃತಿ ಜಾಥಾದ ಸ್ತಭ್ದಚಿತ್ರವು ಗುತ್ತರಗಿ, ಗಬಸಾವಳಿಗಿ ಗ್ರಾಮಗಳಲ್ಲಿ ಸಂಚರಿಸಿ ಸಂವಿಧಾನ ಕುರಿತು ಜಾಗೃತಿ ಮೂಡಿಸಿತು.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿಗಳಾದ ತಾರಾನಾಥ ರಾಠೋಡ, ಮುಖ್ಯ ಅಧಿಕಾರಿಗಳು ಪಟ್ಟಣ ಪಂಚಾಯತ್ ಮೋರಡಗಿ, ಪಿ.ಡಿ.ಒ ರಾಘವೇಂದ್ರ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರು ಶಿವಲಿಂಗಪ್ಪ ಹಚಡದ, ಉಪಾಧ್ಯಕ್ಷರು ದೌಲಬಿ ನಡುವುನಕೇರಿ, ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ಬಸವನಬಾಗೇವಾಡಿ: ಮುತ್ತಗಿಯಲ್ಲಿ ಅದ್ದೂರಿ ಸ್ವಾಗತ- ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧಚಿತ್ರವು ಶನಿವಾರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮ ಪಂಚಾಯತಿಯಲ್ಲಿ ಸಂಚರಿಸಿದ ರಥಕ್ಕೆ ಅದ್ಧೂರಿಯಾಗಿ ಸ್ವಾಗತಿಸಿ ಸಾಮೂಹಿಕವಾಗಿ ಸಂವಿಧಾನ ಪೀಠಿಕಾ ಭಾಗ ಪ್ರತಿಜ್ಞೆ ಬೋಧಿಸಲಾಯಿತು.
ಮುತ್ತಗಿ ಗ್ರಾಮದಿಂದ ಯರನಾಳ ಕಡೆ ಸಂಚರಿಸಿದ ಜಾಥಾ ರಥಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಯುವಕರು, ಸೇರಿದಂತೆ ಸಂವಿಧಾನ ಜಾಗೃತಿ ಜಾಥಾದ ರಥಯಾತ್ರೆಗೆ ಪುಷ್ಪನಮನ ಸಲ್ಲಿಸಿ, ಬಳಿಕ ಮುಖ್ಯ ರಸ್ತೆಯಿಂದ ಮೆರವಣಿಗೆದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.
ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನ ಓದಿ ಜೀವನಕ್ಕೆ ನ್ಯಾಯಯುತ ರಕ್ಷಣೆ ಪಡೆದುಕೊಳ್ಳಬೇಕು ಎಂದು ಕೆ.ಬಿ.ಎಸ್. ಕತ್ತರಕಿಹಾಳ ಶಿಕ್ಷಕರು ಮಾದವ ಗುಡಿ ಹೇಳಿದರು.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಅಭಿಯಾನವನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಹಸಿಲ್ದಾರ ಜಿ.ಎಸ್.ನಾಯಕ ಮಾತನಾಡಿ, ಹುಟ್ಟಿನಿಂದ ಸಾವಯವವರಿಗೆ ಒಂದಲ್ಲ ಒಂದು ಕಾನೂನಿನಡಿ ಬದುಕಬೇಕಿದೆ. ನೆಮ್ಮದಿ ಬದುಕಿಗೆ ಕಾನೂನು ಅವಶ್ಯವಿದೆ. ಕಾನೂನು ತಿಳಿವಳಿಕೆ ಅವಶ್ಯವಿದೆ. ಸಂವಿಧಾನವನ್ನು ಓದಿ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಂತಪ್ಪ ಕೊಲಕಾರ, ಪಿ.ಡಿ.ಒ ಅಧಿಕಾರಿಗಳಾದ ರವಿ ಗುಂಡಳ್ಳಿ, ನೋಡಲ ಅಧಿಕಾರಿಗಳಾದ ಎಮ್. ಹೆಚ್. ಯರಝೆರಿ, ಉಪಾಧ್ಯಕ್ಷರಾದ ಹಣಮಂತ ಹಾದಿಮನಿ, ಬೀರಲಿಂಗೇಶ್ವರ ಪಟ್ಟದ ಪೂಜಾರಿಗಳಾದ ಭೀಮಪ್ಪ ಮುತ್ಯಾ, ಬಿ.ಆರ್.ಪಿ ಭಾರತಿ ಪಾಟೀಲ್. ಆರ್.ಪಿ ಮನಗುಳಿ ಎಸ್.ಬಿ.ಸಜ್ಜನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರಾದ ಅಧಿಕಾರಿಗಳು, ಸಂಘಟನೆ ಪದಾಧಿಕಾರಿಗಳು ವಿವಿಧ ಮುಖಂಡರು, ಅಧಿಕಾರಿಗಳು, ಮತ್ತು ಹಿರಿಯರು ಉಪಸ್ಥಿತರಿದ್ದರು.
ಬಸವನಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ಕಾರ್ಯಮದಲ್ಲಿ ಸಂವಿಧಾನ ಪೀಠಿಕೆ ಓದಿ ಪ್ರಮಾಣ ವಚನ ಮಾಡಲಾಯಿತು.