ಸಿಂದಗಿ: ಬಸವಣ್ಣನವರು ಸಣ್ಣ ಸಮಾಜವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ದರು. ಆದರೆ ಕಾಯಕ ಶರಣರ ಜಯಂತಿಯ ದಿನ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಅಗೌರವ ತೋರಿಸಿದ್ದು ಖಂಡನೀಯ ಎಂದು ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡ ಕಾಯಕ ಶರಣರಾದ ಮಾದರ ಚೆನ್ನಯ್ಯ, ಡೋಹರ್ ಕಕ್ಕಯ್ಯ, ಮಾದರ ಧೂಳಯ್ಯ, ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಣ್ಣ ಸಮಾಜವೆಂದು ತಿಳಿದು ಅಧಿಕಾರಿಗಳು ಗೈರಾಗಿದ್ದು ಬೇಸರವಾಗಿದೆ. ಇನ್ನು ಮುಖ್ಯಾಧಿಕಾರಿಗಳು ಪಟ್ಟಣದ ವೃತ್ತಗಳನ್ನು ಸ್ವಚ್ಚಗೊಳಿಸಬೇಕು. ತಹಶೀಲ್ದಾರ್‌ರು ಆದೇಶ ಮಾಡಬೇಕು. ತಾಲೂಕು ಆಡಳಿತ ಜಯಂತಿಗಳನ್ನು ಕಾಟಾಚಾರಕ್ಕೆ ಆಚರಣೆ ಮಾಡದೇ ಮುಂದಿನ ಯುವ ಜನಾಂಗಕ್ಕೆ ಮಾದರಿಯಾಗುವಂತೆ ಆಚರಣೆಯಾಗಲಿ ಎಂದರು.
ಈ ವೇಳೆ ಸಾಯಬಣ್ಣ ದೇವರಮನಿ ಮತ್ತು ಸಾಯಬಣ್ಣ ಪುರದಾಳ ಮಾತನಾಡಿದರು.
ಈ ವೇಳೆ ಗ್ರೇಡ್ ೨ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ, ಜಿ.ಎಸ್.ರೋಡಗಿ, ಕಂದಾಯ ನಿರೀಕ್ಷಕ ಆಯ್.ಎ.ಮಕಾಂದಾರ, ರವಿಕಿರಣ ಕಟಕೆ, ಸುನಂದಾ ಯಂಪುರೆ, ಕಸಾಪ ಮಾಜಿ ತಾಲೂಕಾಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ರಾಜಕುಮಾರ ಭಾಸಗಿ, ರಾಜು ಗುಬ್ಬೇವಾಡ ಸೇರಿದಂತೆ ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment