ಕೊಲ್ಹಾರ: ಮಾನವರ ಆದರ್ಶ ಬದುಕಿಗೆ ಜಾನಪದ ಆಚಾರ ವಿಚಾರಗಳು ದಾರಿ ದೀಪವಾಗಿವೆ. ಸಾರ್ವತ್ರಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತ, ಜನರ ಬದುಕಿನಲ್ಲಿ ಶಾಂತಿ ಹಾಗೂ ನೆಮ್ಮದಿ ತುಂಬಬಲ್ಲ ಸಾಮರ್ಥ್ಯ ಜಾನಪದ ಸಂಸ್ಕೃತಿಗಿದೆ. ಅದಕ್ಕಾಗಿ ಜಾನಪದ ಸಂಸ್ಕೃತಿ ಎಂದಿಗೂ ಹಾಳಾಗಬಾರದು ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಹೇಳಿದರು.
ಕೊಲ್ಹಾರ ತಾಲೂಕಿನ ಕವಲಗಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾ ಘಟಕ ಮತ್ತು ಕೊಲ್ಹಾರ ತಾಲೂಕು ಘಟಕದ ಸಹಯೋಗದಲ್ಲಿ ಕೂಡಗಿ ಕ ಜಾ ಪ ವಲಯ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,
ಹಿರಿಹೊಳಿ ತಟದ ಈ ಭಾಗದಲ್ಲಿ ಜನಪದ ಕಲೆಗಳು ಪ್ರತಿ ಮನೆಯಲ್ಲಿಯೂ ಕಾಣುತ್ತೇವೆ. ಸಂಘ, ಸಂಸ್ಥೆ ಮತ್ತು ಸಮುದಾಯಗಳು ಜಾನಪದ ಕಲಾವಿದರಿಗೆ ಸಹಾಯ ಸಹಕಾರ ನೀಡಲು ಕರೆ ನೀಡಿದರು.
ನೂತನ ಪದಾಧಿಕಾರಿಗಳಿಗೆ ಪದಪತ್ರ ನೀಡಿ ಮಾತನಾಡಿದ ವಿಜಯಪುರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಗದೀಶ ಸಾಲಳ್ಳಿ, ವಿಜಯಪುರ ಜಿಲ್ಲೆಯಲ್ಲಿ ಅನೇಕ ಸಂಘಟನೆಗಳಲ್ಲಿ ಕನ್ನಡ ಜಾನಪದ ಪರಿಷತ್ ಮುಂಚೂಣಿಯಲ್ಲಿದೆ. ಜಾನಪದ ಕಲಾವಿದರ ಮತ್ತು ಸಾಹಿತಿಗಳ ಉಳಿವಿಗಾಗಿ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಮತ್ತು ಅವರ ಪದಾಧಿಕಾರಿಗಳು ಜನ ಮೆಚ್ಚುವ ಹಾಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ಬಸವನಬಾಗೇವಾಡಿ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರೇಮಠದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಜಾನಪದ ಪರಿಷತ್ ಕೊಲ್ಹಾರ ತಾಲೂಕಾಧ್ಯಕ್ಷ ಮಲ್ಲಪ್ಪ ಗಣಿ ಅಧ್ಯಕ್ಷತೆ ವಹಿಸಿದ್ದರು.
ಕ ಜಾ ಪ ನಿಡಗುಂದಿ ತಾಲೂಕಾಧ್ಯಕ್ಷ ವೈ ಎಸ್ ಗಂಗಶೆಟ್ಟಿ, ಕ ಜಾ ಪ ಜಿಲ್ಲಾ ಸಂಚಾಲಕ ಪ್ರೊ ಗುರುರಾಜ ಹಳ್ಳೂರ, ಜಿಲ್ಲಾ ಘಟಕದ ಸದಸ್ಯರಾದ ಸಿದ್ಧರಾಮ ಬಿರಾದಾರ, ಮೌಲಾಸಾಹೇಬ ಜಹಾಗೀರದಾರ ಮಾತನಾಡಿದರು.
ನೂತನ ವಲಯ ಘಟಕದ ಅಧ್ಯಕ್ಷ ದುಂಡಯ್ಯ ಮಠಪತಿಯವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಳೂತಿ, ಸುಳಕೋಡ, ಉಪ್ಪಲದಿನ್ನಿ ಹೆಜ್ಜೆಮೇಳ, ಕವಲಗಿ ಡೊಳ್ಳಿನಪದ, ತೆಲಗಿ ಹಲಗೆ ಮಜಲು ಸೇರಿದಂತೆ ಹತ್ತಾರು ಜನಪದ ಕಲಾ ತಂಡಗಳ ಪ್ರದರ್ಶನ ನಡೆಯಿತು.
ವಲಯ ಘಟಕದ ನೂತನ ಅಧ್ಯಕ್ಷ ದುಂಡಯ್ಯ ಮಠಪತಿ ಸ್ವಾಗತಿಸಿದರು. ಶಿಕ್ಷಕ ವಿಶ್ವನಾಥ ಪತ್ತಾರ ನಿರೂಪಿಸಿದರು. ಅನೀಲಕುಮಾರ ತಳವಾರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment