ಬಸವನಬಾಗೇವಾಡಿ: ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬರು ಅರಿತುಕೊಂಡು ಜೀವನ ಸಾಗಿಸಬೇಕೆಂದು ಮುತ್ತಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಪ್ರೀತಿ ಎಸ್. ಹೇಳಿದರು.
ತಾಲೂಕಿನ ಮುತ್ತಗಿ ಗ್ರಾಮದ ಮಾರುತೇಶ್ವರ ಕಲ್ಯಾಣ ಮಂಟಪದಲ್ಲಿ ಸಂವಿಧಾನ ಜಾಗೃತಿ ಜಾಥಾಯಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದ ರೂಪುರೇಷೆ, ಮೌಲ್ಯ, ಸಿದ್ದಾಂತ ಮತ್ತು ಉದ್ದೇಶಗಳ ಸಾರಾಂಶವೇ ಸಂವಿಧಾನದ ಪ್ರಸ್ತಾವನೆಯಾಗಿದೆ. ಜನತೆಯ ಧ್ಯೇಯಗಳನ್ನು ನಿರ್ಧರಿಸಿ ಘೋಷಿಸಿಕೊಂಡ ಆದರ್ಶಗಳ ತತ್ವವಾಗಿದೆ. ವ್ಯಕ್ತಿತ್ವ ವಿಕಸನವಾಗಲು ಹಕ್ಕುಗಳ ಅಗತ್ಯವಿದೆ. ನಮ್ಮ ಸಂವಿಧಾನ ನಮ್ಮ ಹೆಮ್ಮೆ. ಎಲ್ಲರೂ ಸಂವಿಧಾನಕ್ಕೆ ಬದ್ಧರಾಗಿ ಜೀವನ ಸಾಗಿಸಬೇಕೆಂದರು.
ಸಾನಿಧ್ಯ ವಹಿಸಿದ್ದ ವೀರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಡಿಎಸ್ಎಸ್ ಮುಖಂಡರಾದ ಅಶೋಕ ಚಲವಾದಿ, ಅಶೋಕ ನಡುವಿನಮನಿ, ಶ್ರೀಶೈಲ ಜಾಲವಾದಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಸೀಲ್ದಾರ ಜಿ.ಎಸ್.ನಾಯಕ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಭವಾನಿ ಪಾಟೀಲ, ಬಿಇಓ ವಸಂತ ರಾಠೋಡ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ, ಜಾಥಾದ ನೋಡಲ್ ಅಧಿಕಾರಿ ಎಂ.ಎಚ್.ಯರಝರಿ, ಪಿಡಿಓ ಬಿ.ಎಸ್.ಬಡಿಗೇರ, ಗ್ರಾಪಂ ಅಧ್ಯಕ್ಷೆ ನೀಲಾ ಪಾಟೀಲ, ಉಪಾಧ್ಯಕ್ಷೆ ಕವಿತಾ ಬಡಿಗೇರ, ಮುಖಂಡರಾದ ರಮೇಶ ಸೂಳಿಬಾವಿ, ಪ್ರೇಮಕುಮಾರ ಮ್ಯಾಗೇರಿ, ಪರಶುರಾಮ ದಿಂಡವಾರ, ಮಹಾಂತೇಶ ಸಾಸಾಬಾಳ, ಸುರೇಶ ಸಿಂಗೆ ಇತರರು ಇದ್ದರು. ಎಂ.ಬಿ.ತೋಟದ ಸ್ವಾಗತಿಸಿದರು. ಎಸ್.ಎಸ್.ಚಿಮ್ಮಲಗಿ ನಿರೂಪಿಸಿದರು. ಎ.ಎಚ್.ಮುಲ್ಲಾ ವಂದಿಸಿದರು.
ಮೆರವಣಿಗೆಃ ಕಾರ್ಯಕ್ರಮಕ್ಕೂ ಮುನ್ನ ಮುತ್ತಗಿ ಕ್ರಾಸ್ನಲ್ಲಿ ಸಂವಿಧಾನ ಜಾಗೃತಿ ಜಾಥಾದ ಸ್ಥಬ್ಧಚಿತ್ರವನ್ನು ಪೂಜೆ ಸಲ್ಲಿಸುವ ಮೂಲಕ
Subscribe to Updates
Get the latest creative news from FooBar about art, design and business.
Related Posts
Add A Comment