ನಿಡಗುಂದಿ: ಪಟ್ಟಣದ ಗ್ರಾಮೀಣ ವಿದ್ಯಾವರ್ಧಕ ಸಂಘದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ 2001-02 ನೇ ಸಾಲಿನಲ್ಲಿ ಪಿಯುಸಿ ಕಲಿತ ವಿದ್ಯಾರ್ಥಿಗಳ ಗುರುನಮನ ಕಾರ್ಯಕ್ರಮ ಜರುಗಿತು.
ಕಪ್ಪು ಪ್ಯಾಂಟ್ ಶ್ವೇತವರ್ಣದ ಶರ್ಟ್, ಹೆಗಲ ಮೇಲೆ ಶೆಲ್ಲೆ ತಲೆಯ ಮೇಲೆ ಖಾದಿ ಟೋಪಿ ವಿದ್ಯಾರ್ಥಿಗಳು ಧರಿಸಿದರೆ, ಒಂದೇ ಬಣ್ಣದ ಕಾಟನ್ ಸಾರಿ ಗಳನ್ನು ಧರಿಸಿ ಕಲರ್ ಫುಲ್ ಕನ್ನಡಕಗಳನ್ನು ಮಹಿಳೆಯರು ಧರಿಸಿದ್ದರು. ಕಾಲೇಜಿನ ಮಹಾ ದ್ವಾರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು ಮಹದ್ವಾರದಿಂದ ಹಿಡಿದು ಸಭಾಂಗಣದವರಿಗೆ ಹೂಗಳಿಂದ ಪಥವನ್ನು ಸಿದ್ಧಪಡಿಸಲಾಗಿತ್ತು. ಅದೇ ಪಥದಲ್ಲಿ ತಮಗೆ ಕಲಿಸಿದ ಶಿಕ್ಷಕರ ಆಗಮನದ ವೇಳೆ ಎಲ್ಲಾ ಹಳೆ ವಿದ್ಯಾರ್ಥಿಗಳು ಪುಷ್ಪಾರ್ಚನೆಗೈದು ಸ್ವಾಗತ ಕೋರಿದರು. ಪರಿಸರ ಸ್ನೇಹಿ ಸಿಡಿ ಮದ್ದುಗಳನ್ನು ಬಳಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸಿದ್ದಣ್ಣ ನಾಗಠಾಣ, ನಮ್ಮ ತಂದೆ ಎಸ್.ಜಿ. ನಾಗಠಾಣ ಅವರ ದೂರದೃಷ್ಠಿತ್ವ ಹಾಗೂ ಕಾರ್ಯತತ್ಪರತೆಯ ಕಾರಣ ಗ್ರಾಮೀಣ ಮಕ್ಕಳಿಗೆ ಉನ್ನತ ಶಿಕ್ಷಣ ದೊರೆಯುವಂತಾಯಿತು ಎಂದರು.
ಶಾಲೆಯ ಹಲವು ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಸಂಘಟಿಸಿದ ಬಗ್ಗೆ, ಕಾಲೇಜಿನ ಉಪನ್ಯಾಸಕರ ಕೊಡುಗೆ, ಪಾಠದ ಶೈಲಿಯನ್ನು ಸ್ಮರಿಸಿದರು.
ಕಾಲೇಜಿನ ಪ್ರಾಚಾರ್ಯ ಎಲ್.ಟಿ. ಚವ್ಹಾಣ, ನಿವೃತ್ತ ಪ್ರಾಚಾರ್ಯ ಎಸ್ ಎಸ್ ಹೊಸಮನಿ, ಎನ್ ಡಿ ಮಿರಜಕರ, ಎಂ ಎನ್ ಬಕಾಟೆ, ಎಂ ಬಿ ಚಿನಿವಾರ, ತಮ್ಮ ಅನುಭವ ಹಾಗೂ ವಿದ್ಯಾರ್ಥಿಗಳಿಗೆ ಜೀವನದ ಬದುಕುವ ಮೌಲ್ಯಗಳ ಬಗ್ಗೆ ವಿವರಿಸಿ ರಾಜ್ಯ ಪ್ರಶಸ್ತಿಗಿಂತಲೂ ಮಿಗಿಲಾದ ಕೊಡುಗೆಯನ್ನು ತಾವು ನೀಡಿದ್ದೀರಿ ಎಂದು ಭಾವಪರವಶರಾಗಿ ಎಂದರು. ಉಪನ್ಯಾಸಕರ ಕಣ್ಣಾಲಿಗಳನ್ನು ಕಂಡು ಹಳೆ ವಿದ್ಯಾರ್ಥಿಗಳೆಲ್ಲಾ ಕಣ್ಣೀರ ಕಡಲಲ್ಲಿ ಹರಿಸುವಂತೆ ಮಾಡಿತು.
ಉಪನ್ಯಾಸಕರಾದ ಎಂ ಎ ಮೈದರ್ಗಿ, ಎಂ.ಎಸ್. ಭಾವಿಕಟ್ಟಿ, ಜಗದೀಶ ವಾರಿ, ಮನೋಹರ ಬಡಿಗೇರ, ಟಿ ಎಂ ರಾಠೋಡ್, ಬೋಧಕೇತರ ಸಿಬ್ಬಂದಿಗಳಾದ ಬಸವರಾಜ ಬಿರಾದಾರ, ಮಲ್ಲಯ್ಯ ಸಾಲಿಮಠ, ಆರ್.ಎ. ಚಪ್ಪರಬಂದ್, ಶೇಖರಯ್ಯ ವಿಭೂತಿ, ಯಮನಪ್ಪ ಅದವಾನಿ ಪಾಲ್ಗೊಂಡಿದ್ದರು. ಎಲ್ಲಾ ಗುರುಗಳನ್ನು ಸನ್ಮಾನಿಸಲಾಯಿತು.
ಹಳೆ ವಿದ್ಯಾರ್ಥಿಗಳಾದ ಎಂ.ಎಚ್. ಲಷ್ಕರಿ, ಶ್ರೀನಾಥ್ ಬಣ್ಣದ, ಮೇಲಿನಮನಿ ,ವಿನೋದ್ ಬಿರಾದಾರ್ ,ಗಣೇಶ್ ಹಳಮನಿ ,ರಾಘವೇಂದ್ರ ವಡವಡಗಿ ,ನೀಲಾಂಬಿಕಾ ಹಾವೇರಿ ,ಸುಮಲತಾ ಕೂಚಬಾಳ, ರಾಜೇಶ್ವರಿ ಗೋಡ್ಯಾಳ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment