ವಿಜಯಪುರ: ಇಡೀ ಜಗತ್ತೀನಲ್ಲಿ ನಮ್ಮ ದೇಶದ ಸಂವಿಧಾನ ಅತ್ಯಂತ ವಿಶೇಷ ಮತ್ತು ವಿಶಿಷ್ಟವಾದ ಸಂವಿಧಾನವಾಗಿದೆ. ಅಂತಹ ಬೃಹತ್ ಸಂವಿಧಾನವನ್ನು ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರಿಗೆ ನಾವೇಲ್ಲರು ಸದಾ ಚಿರರುಣಿ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಸೆವಂತಿ ಜಾಧವ ಹೇಳಿದರು.
ಕೋಲ್ಹಾರ ತಾಲೂಕಿನ ಮಲಘಾಣ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಅಭಿಯಾನವನ್ನು ಉದ್ದೇಶಿಸಿದ ಅವರು ಮಾತನಾಡಿದರು.
ನಮ್ಮ ಸಂವಿಧಾನದ ಅರಿವನ್ನು ಮೂಡಿಸುವ ಸಲುವಾಗಿ ಸರ್ಕಾರದಿಂದ ಹಮ್ಮಿಕೊಂಡಂತಹ ಈ ಜಾಥಾ ಅಭಿಯಾನ ಒಂದು ವಿಶೇಷ ಆಲೋಚನೆಯಾಗಿದೆ. ಸಂವಿಧಾನವನ್ನು ಪ್ರತಿಯೊಬ್ಬರು ಸಹ ತಿಳಿದುಕೊಂಡು ಬದುಕಬೇಕಾದದ್ದು ಅನಿವಾರ್ಯ ಮತ್ತು ಅವಶ್ಯಕ ಎಂದರು.
ಶಿಕ್ಷಕರಾದ ಜಿ.ಪಿ ಕಾಂಬಳೆ ಮಾತನಾಡಿ, ರಾಜ್ಯವು ಆಯ್ಕೆ ಮಾಡಿಕೊಂಡಿರುವಂತಹ ಜೀವನದ ವಿಧಾನವನ್ನು ಸಂವಿಧಾನ ಎಂದು ಅರಿಸ್ಟಾಟಲ್ ಹೇಳುತ್ತಾರೆ. ಸಂವಿಧಾನ ಎಂದರೆ ಒಂದು ದೇಶದ ಸರ್ಕಾರ ಹೇಗಿರಬೇಕು ಎಂದು ತಿಳಿಸುವ ಮೂಲಭೂತ ಚೌಕಟ್ಟನ್ನು ಸಂವಿಧಾನ ಎಂದು ಕರೆಯುತ್ತಾರೆ ಎಂದು ಉಪನ್ಯಾಸ ನೀಡಿದರು.
ಮಲಘಾಣ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾದ ಸ್ತಭ್ದಚಿತ್ರಕ್ಕೆ ಡೊಳ್ಳು ಕುಣಿತ, ವಿವಿಧ ವಾಧ್ಯೆಮೇಳ, ಕರಡಿ ಮಜಲು, ಶಾಲಾ ಮಕ್ಕಳ ನೃತ್ಯ ದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಾಟಕ ಪ್ರದರ್ಶನ ಮಾಡಲಾಯಿತು. ಅತ್ಯಂತ ವಿಜೃಂಭನೆಯಾಗಿ ಸಂವಿಧಾನ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ತಹಶಿಲ್ದಾರ ಎಸ್.ಎಸ್ ನಾಯ್ಕಲ್ಮಠ, ನೋಡಲ್ ಅಧಿಕಾರಿಗಳಾದ ಉಮೇಶ, ಪಟ್ಟಣ ಪಂಚಾಯತ್ ಕೋಲ್ಹಾರ ಮುಖ್ಯಾಧಿಕಾರಿಗಳು ಪಿ.ಡಿ.ಒ ಬಸವರಾಜ ಹಳ್ಳಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಅಧಿಕಾರಿಗಳು, ವಿವಿಧ ಮುಖಂಡರು, ಅಧಿಕಾರಿಗಳು, ಮತ್ತು ಹಿರಿಯರು ಉಪಸ್ಥಿತರಿದ್ದರು.
ಆಲಮೇಲ ಗ್ರಾಮದಲ್ಲಿ ಅದ್ದೂರಿ ಸ್ವಾಗತ : ಸಂವಿಧಾನ ಜಾಗೃತಿ ಜಾಥಾದ ಸ್ತಭ್ದಚಿತ್ರವು ಫೆ.೭ರಂದು ಇಂಡಿ ಉಪವಿಭಾಗದ ರಾಮನಳ್ಳಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿ, ನಂತರ ಬಳಗಾನೂರ, ಕೋರಹಲ್ಳಿ, ಸಂಜೆ ಆಲಮೇಲ ಗ್ರಾಮದಲ್ಲಿ ಜಾಗೃತಿ ಜಾಥಾಕ್ಕೆ ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
ಗ್ರಾಮ ಪಂಚಾಯತಿಗಳ ಆವರಣಗಳಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಆಯಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಗಣ್ಯರು ಸೇರಿದಂತೆ ಅಧೀಕ್ಷಕ ಶಿವಲಿಂಗ ಹಚಡದ, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

