ಕೇಂದ್ರದಿಂದ ವೈದ್ಯರ ತಂಡ ವಿಜಯಪುರ ಜಿಲ್ಲೆಗೆ ಭೇಟಿ
ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಮುದ್ದೇಬಿಹಾಳ ತಾಲೂಕಿನಲ್ಲಿ ಆನೇಕಾಲು ರೋಗ ನಿವಾರಣಾ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಔಷಧ ಸೇವಿಸುವ ಕಾರ್ಯಕ್ರಮ ಪೆಬ್ರುವರಿ ತಿಂಗಳಿನಿಂದ ನಡೆಯುತ್ತಿದೆ.
ಈ ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ಕೇಂದ್ರದಿಂದ ಡಾ. ಜಾನ್ಸನ್ ಅಮಲಾ ಜಷ್ಟಿನ್, ಡಾ. ಮಣಿಕಷಾ ದೆಹಲಿ, ಡಾ. ಸಿರಿಷಾ ಪಟೇಲ ಹೈದ್ರಾಬಾದ, ಹಾಗೂ ಬೆಂಗಳೂರಿನ ಸಂಶೋಧನಾ ಅಧಿಕಾರಿಗಳಾದ ಡಾ. ನಾಗರಾಜ, ಸಿಂದಗಿ ಹಾಗೂ ಮುದ್ದೇಬಿಹಾಳ ತಾಲೂಕಿನ ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಿದರು.
ವಿಜಯಪುರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಬಸವರಾಜ ಹುಬ್ಬಳ್ಳಿ ಅವರನ್ನು ಭೇಟಿಯಾಗಿ ಸಾಮೂಹಿಕ ಔಷಧ ಸೇವಿಸುವ ಕಾರ್ಯಕ್ರಮ ೧೦೦% ಪ್ರಗತಿ ಸಾಧಿಸುವ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ.ಜೈಬುನ್ನಿಸಾಬೇಗಂ ಬೀಳಗಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

