ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ ಮತ್ತು ಸಿಂದಗಿ ಹೋಬಳಿಯ ರೈತರಿಗೆ ಫೆ.೬ ಹಾಗೂ ೮ ರಂದು ಕ್ರಮವಾಗಿ ರೈತ ಸಂಪರ್ಕ ಕೇಂದ್ರ ಆಲಮೇಲ ಮತ್ತು ರೈತ ಸಂಪರ್ಕ ಕೇಂದ್ರ ಸಿಂದಗಿಯಲ್ಲಿ ಸೂಕ್ಷö್ಮ ನೀರಾವರಿ ಘಟಕಗಳು ಉಪಯೋಗಗಳು ಮತ್ತು ನಿರ್ವಹಣೆ ಕುರಿತು ತರಬೇತಿ ಆಯೋಜಿಸಲಾಗಿದೆ.
ಆಸಕ್ತ ರೈತರು ತರಬೇತಿಯಲ್ಲಿ ಭಾಗವಹಿಸಿ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿ ಶ್ರೀಮತಿ ಫಾತೀಮಾ ಬಾನು ಸುತಾರ್ ಮೊ: ೯೮೮೬೧೩೪೩೧೦ ಸಂಖ್ಯೆಗೆ ಸಂಪರ್ಕಿಸುವಂತೆ ಉಪ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
