ಇಂಡಿ: ತಾಲ್ಲೂಕಿನ ಆಳೂರ ಗ್ರಾಮದ ಶಿವಕುಮಾರ್ ಗಂಗಯ್ಯ ಹಿರೇಮಠ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದ್ದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಏಷ್ಯಾ ಇಂಟರ್ನ್ಯಾಷನಲ್ ಟೀಚರ್ ರಿಸರ್ಚ್ ಯೂನಿವರ್ಸಿಟಿಯಲ್ಲಿ ವೇದಗಾಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸಾಧನೆಗೈದಿದ್ದ ಅವರನ್ನು ನವನಗರ ಹುಬ್ಬಳ್ಳಿಯಲ್ಲಿರುವ ಕಾಶಿ ಜಗದ್ಗುರುಗಳ ಶಾಖಾ ಪೀಠವಾದ ಜಂಗಮವಾಡಿ ಶ್ರೀಮಠದ ಆವರಣದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.
ಹಿರಿಯ ಸಾಹಿತಿ, ಸಂಗೀತಗಾರ ಡಾ. ರಾಜಗುರು ಕಲಕೇರಿ, ಡಾ. ವಿರೂಪಾಕ್ಷ ದೇವರು, ಜಂಗಮವಾಡಿ ಮಠದ ಡಾ. ರಾಜೇಂದ್ರ ಶಿವಾಚಾರ್ಯರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

