ಸಿಂದಗಿ: ಗ್ರಾಮದಲ್ಲಿರುವ ಪ್ರತಿ ಕುಟುಂಬ ನರೇಗಾ ಯೋಜನೆಯ ಸಹಾಯಧನ ಪಡೆಯಲು ಅರ್ಹತೆ ಹೊಂದಿದ್ದು ಕೃಷಿ ಹೊಂಡ, ಬದು ನಿರ್ಮಾಣ, ಕುರಿ ಶೆಡ್, ದನದ ಶೆಡ್, ಕೋಳಿ ಶೆಡ್, ಇಂಗು ಗುಂಡಿ ಹೀಗೆ ಹಲವು ವ್ಯಯಕ್ತಿಕ ಯೋಜನೆಯ ಕಾಮಗಾರಿಗಳ ಸದುಪಯೋಗ ಪಡೆಯಬೇಕು ಎಂದು ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ ಹೇಳಿದರು.
ತಾಲೂಕಿನ ಬಂದಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಓತಿಹಾಳ ಗ್ರಾಮದ ಅಮೃತ ಸರೋವರ ದಡದಲ್ಲಿ ಹಮ್ಮಿಕೊಂಡ ನರೇಗಾ ದಿವಸ ಆಚರಣೆ ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬೇರೆ ಕಡೆ ಕೆಲಸಕ್ಕೆ ಹೋಗಬಯಸುವವರು ಕೂಡಾ ಈ ಯೋಜನೆಯಲ್ಲಿ ಕೆಲಸ ಮಾಡಿ ದಿನಕ್ಕೆ ೩೧೬ ರೂ. ಗಳಂತೆ ವರ್ಷಕ್ಕೆ ಒಂದು ಕುಟುಂಬ ೧೦೦ ದಿನ ಕೆಲಸ ಮಾಡಲು ಅರ್ಹರರು ಆದ್ದರಿಂದ ಇದರ ಪ್ರಯೋಜನ ಎಲ್ಲರೂ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಸವರಾಜ್ ಶಹಾಪುರ, ಕಾರ್ಯದರ್ಶಿ ರಾಜಾಸಾಬ್ ಮುಜಾವರ್, ಗ್ರಾಮ ಪಂಚಾಯತ್ ಸದಸ್ಯರು ಶ್ರೀ ಕೇಶುರಾಯ ಮಕಣಪುರ, ಮಲ್ಲು ನಾಕೇತ್ತಿನ, ರಾಜು ವಠಾರ, ಮಲ್ಲು ನಾಟಿಕಾರ, ಹವಳಪ್ಪ ನಾಟಿಕಾರ, ಶಿವಶರಣ ವಂದಗನೂರ, ಇಂಜಿನಿಯರ್ ಸಂತೋಷ್ ಪಾಸೋಡಿ, ಶಂಕರ ಪೂಜಾರಿ, ಸಾಗರ ಶೆಟ್ಟಿ, ಆನಂದ ವಾಲಿಕಾರ, ಆರಿಫ್ ಶೇಖಜಿ, ರಮೇಶ ನಿಗಡಿ, ಬಸವರಾಜ್ ಗೊರವ, ಸತೀಶ್ ಮತ್ತು ತಾಲೂಕಿನ ಗ್ರಾಮ ಕಾಯಕ ಮಿತ್ರರು, ಸಿಬ್ಬಂದಿಗಳು ಗ್ರಾಮಸ್ಥರು ಹಾಜರಿದ್ದರು. ಭೀಮರಾಯ ಚೌಧರಿ ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

